ಕುಂದಗೋಳ : ರಂಭಾಪೂರಿ ಜಗದ್ಗುರುಗಳಿಂದ ವಿದ್ಯುಕ್ತವಾಗಿ ಚಾಲನೆಗೊಂಡು ಬಾಳೆಹೊನ್ನೂರಿನಿಂದ ಆಗಮಿಸಿದ ಶ್ರೀ ಬೇಡ ಜಂಗಮ ಜ್ಯೋತಿ ರಥವನ್ನು ಶನಿವಾರ ಸಂಶಿ ಗ್ರಾಮದಲ್ಲಿ ಜಂಗಮ ಬಾಂಧವರು ಅದ್ಧೂರಿಯಾಗಿ ಸ್ವಾಗತಿಸಿದರು.
ಬೇಡ ಜಂಗಮ ಜ್ಯೋತಿ ರಥೋತ್ಸವವು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಶ್ರೀ ಸಿದ್ಧಾರೂಡ ಮಠದ ಬಳಿ ವಿಶೇಷ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಲಾಯಿತು.
ಈ ವೇಳೆ ಸ್ಥಳೀಯ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾತನಾಡಿ ಶಶಿಧರ ಹಿರೇಮಠ, ಕರ್ನಾಟಕದಲ್ಲಿ 34 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿರುವ ಜಂಗಮ ಬಾಂಧವರನ್ನೆಲ್ಲ ಸಂಘಟನಾತ್ಮಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಹಿರಿಯ ನ್ಯಾಯವಾದಿ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಬೇಡ ಜಂಗಮ ರಥ ರಾಜ್ಯಾದ್ಯಂತ ಸಂಚರಿಸುತ್ತಿದೆ ಎಂದರು.
ಎಂ.ಎಸ್.ಹಿರೇಮಠ ಮಾತನಾಡಿ. ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಜಂಗಮರ ನ್ಯಾಯಸಮ್ಮತ ಬೇಡಿಕೆಯನ್ನು ಸರ್ಕಾರ ಶೀಘ್ರವಾಗಿ ಈಡೇರಿಸುವ ಮೂಲಕ ಸಮಾಜಕ್ಕೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದರು.
ಬಳಿಕ ಶ್ರೀ ಬೇಡ ಜಂಗಮ ಜ್ಯೋತಿ ರಥವನ್ನು ವಿವಿಧ ಸಂಗೀತ ವಾದ್ಯಗಳೊಂದಿಗೆ ಸಿದ್ಧಾರೂಡ ಮಠದಿಂದ ಚಾಕಲಬ್ಬಿ ರಸ್ತೆಯವರೆಗೆ ಮೆರವಣಿಗೆ ಮಾಡಿ ಭಕ್ತಿಪೂರ್ವಕ ಬೀಳ್ಕೂಡುಗೆ ನೀಡಲಾಯಿತು.
ಮೆರವಣಿಗೆಯಲ್ಲಿ ಸಂಘದ ಉಪಾಧ್ಯಕ್ಷ ಮುತ್ತಣ್ಣ ಜಡಿಮಠ, ಅನ್ನದಾನೇಶ್ವರ ಕುಂದಗೋಳಮಠ, ಚನ್ನಬಸಯ್ಯ ಹಿರೇಮಠ, ಅರುಣಕುಮಾರ ಜಡಿಮಠ, ಎಂ.ಎಸ್.ಹಿರೇಮಠ, ಮೃತ್ಯುಂಜಯ ಗಡ್ಡದೇವರಮಠ, ಜೆ.ಎಂ.ಹಿರೇಮಠ,ರವಿ ಕೇರಿಮಠ, ಕುಮಾರ್ ಹಿರೇಮಠ, ಕುಮಾರ್ ಕೇರಿಮಠ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
23/03/2022 02:27 pm