ಹುಬ್ಬಳ್ಳಿ: ನವನಗರದ ನಾರ್ಥ್ ಕರ್ನಾಟಕ ವುಮೆನ್ ಎಂಟರ್ಪ್ರಿನರ್ ಅಸೋಸಿಯೇಷನ್ ನವನಗರ ಹುಬ್ಬಳ್ಳಿ ಇವರು ನವನಗರದ ಶಿವಾನಂದ ಯಾತ್ರಿ ನಿವಾಸ ಸಭಾಭವನದಲ್ಲಿಂದು ವಿಶ್ವ ಮಹಿಳಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಿದ್ದರು, ಅಲ್ಲದೆ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ನೃತ್ಯ ಭರತನಾಟ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದರು.ಮಹಿಳೆಯರು ಸಹ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಸುನೀತಾ ಮಾಳವದೆಕರ್, ಹಾಗೂ ಪ್ರಿಯಾ ಪುರಾಣಿಕ್ ಉದ್ದಿಮೆದಾರರು ಡಾ.ವಿಜಯಕುಮಾರ ಅಪ್ಪಾಜಿ ಯುವ ಮುಖಂಡ, ಡಾ.ಸುನಿಲ ಮಂಜುನಾಥ ರೇವಣಕರ್ ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರ, ಮಧು ತೋಡುರ್ಕರ್ ಬಿಜೆಪಿ ಮಹಿಳಾ ಮುಖಂಡರು ಉಪಸ್ಥಿತರಿದ್ದರು.
Kshetra Samachara
14/03/2022 06:22 pm