ಹುಬ್ಬಳ್ಳಿ : ಬೇಡದ ಭ್ರೂಣವಾಗಿ ಹುಟ್ಟಿ ಭಿಕ್ಷೆ ಬೇಡಿ ಬದುಕುತಿದ್ದ ಸಾವಿರಾರು ಮಕ್ಕಳಿಗೆ ಆಶ್ರಯ ಕೊಟ್ಟು, ಶಿಕ್ಷಣ ನೀಡಿ ಅವರ ಪಾಲಿಗೆ ಯಶೋಧೆ ಆದ ,ಆ ಅನಾಥರಿಗೆ ತಾಯಿ ಆದ ಸಿಂಧುತಾಯಿ ಸಪಕಾಳ ಜನೇವರಿ 3 ರಂದು ನಮ್ಮನ್ನು ಅಗಲಿದರು.
ಅವರ ಪುಣ್ಯ ಸ್ಮರಣೆ ನಿಮಿತ್ಯ ಅವರ ಜೀವನಾಧಾರಿತ ನಾಟಕ ಅನಾಥರ ಮಾಯಿ ದಿನಾಂಕ ಭಾನುವಾರ ದಿ. 6 ರಂದು ಸಂಜೆ 6:30 ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.
ಹಿರಿಯ ರಂಗಕರ್ಮಿ, ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅವರ ಪರಿಕಲ್ಪನೆ, ಹಾಗೂ ನಿರ್ದೇಶನದ ಈ ನಾಟಕಕ್ಕೆ ಪ್ರವೇಶ ಉಚಿತ.
ನೀವೂ ಬನ್ನಿ... ನಿಮ್ಮವರನ್ನು ಬರಲು ಹೇಳಿ.
Kshetra Samachara
05/03/2022 08:51 am