ಹುಬ್ಬಳ್ಳಿ: ನಗರದ ಕೆ.ಎಸ್.ಎಸ್ ವಿಜಯನಗರ ಶಿಕ್ಷಣ ಸಮಿತಿಯಲ್ಲಿ ೭೩ ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಳ ಅವರು ಸಂವಿಧಾನದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅತಿಥಿಗಳಾಗಿ ಕ್ರೀಡಾಪಟು ಕಮಲಾ ಸಿದ್ದಿ ಮಾತನಾಡಿ, 'ಕನ್ನಡ ನಾಡು ನನ್ನ ಹಸಿವು ನೀಗಿಸಿದ ನಾಡು ಕನ್ನಡವನ್ನೇ ಮಾತನಾಡಿ. ಕನ್ನಡ ಅಭಿಮಾನವನ್ನು ತೋರಬೇಕು' ಎಂದ ಅವರು ಇಂದಿನ ಆರೋಗ್ಯದ ಹಿತದೃಷ್ಟಿಯಿಂದ ಹಲವಾರು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ಗಣರಾಜ್ಯೋತ್ಸವದ ಕುರಿತು ವಿಸ್ತ್ರತವಾಗಿ ಹೇಳಿದ ಅವರು, ಕಮಲಾ ಸಿದ್ಧಿ ಕುರಿತು ಮಾತನಾಡಿ ಕಮಲಾ ಅವರ ಹಾಗೇ ಆದರ್ಶರಾಗಿ ಬೆಳಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ.ಶೇಖ, ಬಿ.ಜಿ.ಮಡ್ಲಿ, ಸಂದೀಪ ಬೂದಿಹಾಳ, ಡಾ. ಎಚ್.ವಿ.ಬೆಳಗಲಿ, ಡಾ. ಪಿ.ಎಸ್. ಹೆಗಡೆ, ಬೀರೇಶ ತಿರಕಪ್ಪನವರ ಉಪಸ್ಥಿತರಿದ್ದರು.
Kshetra Samachara
27/01/2022 03:54 pm