ಹುಬ್ಬಳ್ಳಿ: ದಿವ್ಯಕಾಶಿ ಭವ್ಯ ಕಾಶಿ ಶ್ರೀ ಕಾಶಿ ವಿಶ್ವನಾಥ ಧಾಮ ಲೋಕಾರ್ಪಣೆಯನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡುತ ಹಿನ್ನಲೆಯಲ್ಲಿ, ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಬಿಜೆಪಿ ವತಿಯಿಂದ ಕುಂಭ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಗುರುರಾಜಯೋಗೇಂದ್ರ ಮಹಾ ಸ್ವಾಮೀಜಿ ವಹಿಸಿದ್ದು, ಮಹಿಳೆಯರು ಕುಂಭಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭಗಳಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯ ಸಂತೋಷ ಚೌಹಾನ, ಮಾಜಿ ಶಾಸಕ ಅಶೋಕ ಕಾಟವೆ, ಪ್ರಭು ನವಲಗುಂದಮಠ ಸೇರಿದಂತೆ ಇತರರು ಇದ್ದರು.
Kshetra Samachara
13/12/2021 12:32 pm