ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಜಿದ್ದಾಜಿದ್ದಿನ ಟಗರಿನ ಕಾಳಗ ಗೆದ್ದವರಿಗೆ ನಗದು ಹಣದ ಜೊತೆ ಟ್ರೋಫಿ ಪುರಸ್ಕಾರ

ಕುಂದಗೋಳ : ಎಲ್ಲೇ ನೋಡಿದರಲ್ಲಿ ಶಿಳ್ಳೆ ಚಪ್ಪಾಳೆ, ಜಿದ್ದಾ ಜಿದ್ದಿ ಸ್ಪರ್ಧೆ ಕರ್ನಾಟಕದ ನಾನಾ ಕಡೆಗಳಿಂದ ಯರಗುಪ್ಪಿಗೆ ಆಗಮಿಸಿ ಸ್ಪರ್ಧೆಗಿಳಿದ ಟಗರುಗಳು ಮೈ ರೋಮಾಂಚನ ಎನ್ನಿಸುವ ಆಟೋಟಗಳು ವಿಜಯದ ಸಂಭ್ರಮಗಳು.

ಇಂತಹ ಅದ್ಭುತ ಟಗರಿನ ಕಾಳಗದ ಆಟಕ್ಕೆ ವೇದಿಕೆ ಕಲ್ಫಿಸಿಕೊಟ್ಟವರು ಯರಗುಪ್ಪಿ ಗ್ರಾಮದ ಭಗತಸಿಂಗ್ ಗ್ರೂಪ್ ಯುವಕರು ದೀಪಾವಳಿ ಹಬ್ಬದ ಕಾರ್ತಿಕ ಮಾಸದ ಪ್ರಯುಕ್ತ ರಾಜ್ಯ ಮಟ್ಟದ ಟಗರಿನ ಕಾಳಗದ ಸ್ಪರ್ಧೆಗೆ ಇಡೀ ರಾಜ್ಯದ ಜನ ಕುಂದಗೋಳ ಕಡೆ ತಿರುಗಿ ನೋಡುವಂತೆ ಮಾಡಿತು.

ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಹಾಲು ಹಲ್ಲಿನ ಟಗರಿನ ಕಾಳಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಹಂಚಿನಾಳದ ಟಗರು ಪಡೆದ್ರೇ, ದ್ವಿತಿಯ ಗದಗ, ತೃತೀಯ ಹುಬ್ಬಳ್ಳಿ ಟಗರು ಪಡೆಯಿತು. ಎರೆಡು ಹಲ್ಲಿನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಳ್ಳಾರಿಯ ಹುಯಿಲಗೋಳದ ಟಗರು, ದ್ವಿತಿಯ ಉಣಕಲ್ಲ್ ಟಗರು, ತೃತೀಯ ಬೆಟದೂರು ಗ್ರಾಮದ ಟಗರು ಪಡೆಯಿತು.

ಇನ್ನೂ ಕೊನೆಯ ಸ್ಪರ್ಧೆ ನಾಲ್ಕು ಹಲ್ಲಿನ ಟಗರಿನ ಕಾಳಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕುಸುಗಲ್ ಟಗರು ಪಡೆದ್ರೇ, ದ್ವಿತೀಯ ಮುಳಗುಂದ ಗ್ರಾಮದ ಟಗರು, ತೃತೀಯ ಕುಸುಗಲ್ ಟಗರು ಪಡೆಯಿತು. ಮೂರು ಸ್ಪರ್ಧೆ ಬಹುಮಾನಗಳು ನಗದು ಹಣ ಟ್ರೋಫಿ ಒಳಗೊಂಡಿದ್ದವು. ಕಾರ್ಯಕ್ರಮದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಹಾಗೂ ಕಾಂಗ್ರೆಸ್ ಮುಖಂಡ ಅಡಿವೆಪ್ಪ ಶಿವಳ್ಳಿ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

17/11/2021 04:44 pm

Cinque Terre

74.2 K

Cinque Terre

0

ಸಂಬಂಧಿತ ಸುದ್ದಿ