ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆಂತರ್ಯದ ಕೊಳೆ ತೊಳೆದ 'ದ್ವಂದ್ವ' ನಾಟಕ: ಅಭಿನಯಕ್ಕೆ ಸೈ ಎಂದ ಪ್ರೇಕ್ಷಕ

ಧಾರವಾಡ: ಆಧುನಿಕತೆ ಬೆಳೆದಂತೆಲ್ಲ ಮನುಷ್ಯ ಸಂಬಂಧಗಳು ನಶಿಸುತ್ತಿವೆ. ಬಹುತೇಕವಾಗಿ ಲಾಭ-ನಷ್ಟದ ಲೆಕ್ಕಾಚಾರ ಹಾಕಿದ ಸಂಬಂಧಗಳು ಮಾತ್ರ ಪರಸ್ಪರರ ಹಿತಾಸಕ್ತಿಗಾಗಿ ಉಳಿಯುತ್ತಿವೆ. ಇದರ ಪರಿಣಾಮ ಎಂತದ್ದು ಎಂಬುದರ ಬಗ್ಗೆ ಬೆಳಕು ಚೆಲ್ಲುವ ನಾಟಕ 'ದ್ವಂದ್ವ' ಧಾರವಾಡದಲ್ಲಿ ಪ್ರದರ್ಶಿತವಾಯ್ತು.

ನಗರದ ರಂಗಾಯಣದಲ್ಲಿ ರವಿವಾರ ಸಂಜೆ ನಡೆದ 'ದ್ವಂದ್ವ' ನಾಟಕ ಪ್ರದರ್ಶನ ಪ್ರೇಕ್ಷಕರ ಹೃದಯ ಭಾರಗೊಳಿಸಿತ್ತು. ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆದ ಸೋಮು ರೆಡ್ಡಿ ರಚಿಸಿದ ಈ ನಾಟಕವನ್ನು ವಿಜಯೀಂದ್ರ ಅರ್ಚಕ ಅವರು ಪ್ರೇಕ್ಷಕರಲ್ಲಿ ಮಾನವೀಯ ಪ್ರಜ್ಞೆ ಜಾಗೃತಗೊಳ್ಳುವಂತೆ ನಿರ್ದೇಶಿಸಿದ್ದಾರೆ.

ತಾಯಿ ಇಲ್ಲದ ಮಗ. ತಂದೆಯ ಕಾಳಜಿಯಲ್ಲಿ ಬೆಳೆದರೂ ತಂದೆಯ ಅಭಿಪ್ರಾಯ ಕೇಳದೇ ಮಹತ್ವದ ಗಳಿಗೆಯಲ್ಲಿ ಸ್ವಂತ ನಿರ್ಧಾರ ಕೈಗೊಳ್ಳುತ್ತಾನೆ. ಕ್ಯಾನ್ಸರ್ ಬಾಧಿತ ತಂದೆಯನ್ನು ನಿರಾಕರಿಸುವ ಹೆಂಡತಿ, ಇನ್ನೊಂದೆಡೆ ನಿರುದ್ಯೋಗದ‌ ಕಷ್ಟ, ಇದೆಲ್ಲದರ ನಡುವೆ ಹಿರಿ ಜೀವದ ಒಡಲ ಸಂಕಟದ ವಾಸ್ತವತೆಯನ್ನು ನಾಟಕದಲ್ಲಿ ಹಿಡಿದಿಡಲಾಗಿದೆ.

Edited By : Manjunath H D
Kshetra Samachara

Kshetra Samachara

15/11/2021 06:20 pm

Cinque Terre

60.67 K

Cinque Terre

0

ಸಂಬಂಧಿತ ಸುದ್ದಿ