ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆಂಜನೇಯನ ಮೂರ್ತಿಯ ಅದ್ಧೂರಿ ಮೆರವಣಿಗೆ

ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ಇರುವ ಸೈಬನಕೊಪ್ಪದಲ್ಲಿ ಹನುಮಂತ ದೇವರ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗುತ್ತಿದ್ದು, ನೂತನವಾಗಿ ತರಲಾದ ಆಂಜನೇಯನ ಮೂರ್ತಿಯನ್ನು ಉಪ್ಪಿನ ಬೆಟಗೇರಿ ಗ್ರಾಮದಿಂದ ಮೆರವಣಿಗೆ ಮೂಲಕ ಸೈಬನಕೊಪ್ಪ ಗ್ರಾಮಕ್ಕೆ ಕೊಂಡೊಯ್ಯಲಾಯಿತು.

ಉಪ್ಪಿನ ಬೆಟಗೇರಿ ಗ್ರಾಮದ ಮೂರು ಸಾವಿರ ವಿರಕ್ತಮಠದಲ್ಲಿ ಆಂಜನೇಯನ ಮೂರ್ತಿಯನ್ನು ಇಡಲಾಗಿತ್ತು. ಬಾಗಲಕೋಟೆ ಜಿಲ್ಲೆಯ ಬದಾಮಿಯ ಮಹಿಳಾ ಡೊಳ್ಳು ಕುಣಿತ ಮೆರವಣಿಗೆಯಲ್ಲಿ ಗಮನಸೆಳೆಯಿತು. ಪೂರ್ಣಕುಂಭ ಹೊತ್ತು ಸುಮಂಗಲೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಡಿಜೆ ಅಬ್ಬರಕ್ಕೆ ಯುವಕರು ಕೂಡ ಕುಣಿದು ಕುಪ್ಪಳಿಸಿದರು. ಉಪ್ಪಿನ ಬೆಟಗೇರಿಯ ವಿರಕ್ತಮಠದಿಂದ ಸೈಬನಕೊಪ್ಪ ಗ್ರಾಮಕ್ಕೆ ಆಂಜನೇಯನ ಮೂರ್ತಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಕೊಂಡೊಯ್ಯಲಾಯಿತು. ನಾಳೆ ಶಾಸ್ತ್ರೋಕ್ತವಾಗಿ ಮೂರ್ತಿ ಪ್ರತಿಷ್ಟಾಪನೆ ನಡೆಯಲಿದೆ.

Edited By : Nagesh Gaonkar
Kshetra Samachara

Kshetra Samachara

13/11/2021 09:18 pm

Cinque Terre

18.33 K

Cinque Terre

0

ಸಂಬಂಧಿತ ಸುದ್ದಿ