ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಭಕ್ತಿ ಸಾಕ್ಷಾತ್ಕಾರದಿ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮ

ಕುಂದಗೋಳ : ಭಕ್ತಿ ಸಾಕ್ಷಾತ್ಕಾರ ದೇವರ ಆರಾಧನೆ ಎಂದ್ರೇ ಈ ಹಳ್ಳಿಗಳಲ್ಲಿ ಹಬ್ಬದೌತಣ ಏರ್ಪಟ್ಟು ಬಿಡುತ್ತೆ ನೋಡಿ, ಅಂತಹ ಹಬ್ಬದ ಸೊಬಗಿನ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಕುಂದಗೋಳ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಅತಿ ವಿಜೃಂಭಣೆಯಿಂದ ನಡೆಯುತ್ತಿದೆ.

ಹೌದು ! ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ನೂತನ ದುರ್ಗಾದೇವಿ ಮೂರ್ತಿಯನ್ನು ಟ್ರ್ಯಾಕ್ಟರ್'ನಲ್ಲಿ ಮೆರವಣಿಗೆ ಕೈಗೊಂಡು ಬೈಕ್ ರ್ರ್ಯಾಲಿ ಮೂಲಕ ಬರಮಾಡಿಕೊಂಡ ಗ್ರಾಮಸ್ಥರು, ಸುಲ್ತಾನಪುರ ಗ್ರಾಮದಲ್ಲಿ ಸಂಚಲನ ನಡೆಸಿ ದಶದಿಕ್ಕುಗಳಿಗೆ ಶಾಂತಿ ಪೂಜೆ ಮಾಡಿದರು.

ಈ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ವಾದ್ಯ ವೃಂದ, ಬ್ಯಾಂಡ್ ಕಂಪನಿ, ಡೊಳ್ಳು ಕುಣಿತ, ಕುಂಭ ಕೊಂಡಗಳನ್ನು ಹೊತ್ತ ಮಹಿಳೆಯರ ಸಾಲು, ಭಕ್ತಿ ಸಾರುವ ಗೊರವಯ್ಯಗಳ ಪವಾಡಗಳು ನೋಡುಗರನ್ನು ಸೆಳೆದಿವು. ಇದಲ್ಲದೆ ಮುಂದಿನ ಐದು ದಿನಗಳವರೆಗೆ ಧಾರ್ಮಿಕ ಆಚರಣೆ ಕೈಗೊಳ್ಳಲಿರುವ ಸುಲ್ತಾನಪುರ ಗ್ರಾಮಸ್ಥರು ದೇವಿಯ ಪ್ರಸಾದ ಸೇವಿಸಿ ಪುನೀತರಾಗಿ ಧಾರ್ಮಿಕ ಕಾರ್ಯಕ್ರಮದ ಆಚರಣೆಯಲ್ಲಿ ತೊಡಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

13/11/2021 03:51 pm

Cinque Terre

14.45 K

Cinque Terre

0

ಸಂಬಂಧಿತ ಸುದ್ದಿ