ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸರ್ಕಾರಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಕಲರವ

ಕುಂದಗೋಳ : ಮಕ್ಕಳ ಎದೆಯಲ್ಲಿ ನಾಡು ನುಡಿಯ ಝೇಂಕಾರ, ಕನ್ನಡ ನಾಡು ನುಡಿಯ ಕಲರವ, ಹಳದಿ ಕೆಂಪು ಬಣ್ಣಗಳಲ್ಲಿಯೇ ಕಂಗೋಳಿಸುವ ಮಕ್ಕಳ ತುಂಟಾಟ, ಗಗನಕ್ಕೆ ಮುಖ ಮಾಡಿ ಹಾರುವ ಕರ್ನಾಟಕದ ನಾಡ ಧ್ವಜಗಳು ಶಾಲಾ ಆವರಣದಲ್ಲಿ ಎಲ್ಲೇಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಸಡಗರ.

ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದೇ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಧ್ವಜಾರೋಹಣದ ಜೊತೆ ಮಕ್ಕಳ ಸಾಂಸ್ಕೃತಿಕ ಕಲವದಲ್ಲಿ ಕನ್ನಡ ರಾಜ್ಯೋತ್ಸವದ ಪರಿಮಳ ಎಲ್ಲೇಡೆ ಕಂಪಿಸಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಮಕ್ಕಳು ಹಾಗೂ ಗ್ರಾಮದ ಹಿರಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಸೊರಟೂರ ಹಾಗೂ ಎಸ್ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

01/11/2021 01:19 pm

Cinque Terre

38.86 K

Cinque Terre

0

ಸಂಬಂಧಿತ ಸುದ್ದಿ