ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮ

ಹುಬ್ಬಳ್ಳಿ: ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಗೋಕುಲ ರಸ್ತೆಯಲ್ಲಿರುವ ವಾಕರಸಾಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಕನ್ನಡ ಗೀತೆಗಳ ಗೀತ ಗಾಯನ ಹಾಗೂ ಕನ್ನಡ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗೀತ ಗಾಯನದ ನಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಸಂಕಲ್ಪ ಬೋಧಿಸಿದರು. ವಿಭಾಗಿಯ ತಾಂತ್ರಿಕ ಶಿಲ್ಪಿ ಪ್ರವೀಣ ಈಡೂರ, ಅಧಿಕಾರಿಗಳಾದ ಶಂಕರ ಆಲಮೇಲ, ಎಸ್.ವಿ.ಅಂಗಡಿ, ಎನ್.ಎಫ್. ಹೊಸಮನಿ, ಅಶೋಕ ಡೆಂಗಿ,ಸುನಿಲ ವಾಡೆಕರ, ರೋಹಿಣಿ,ಸದಾನಂದ ಒಡೆಯರ ಮತ್ತು ಸಿಬ್ಬಂದಿಗಳು ಸೇರಿದಂತೆ ನೂರಕ್ಕೂ ಹೆಚ್ಚು ನೌಕರರು ಸ್ವಯಂ ಪ್ರೇರಿತರಾಗಿ ಉತ್ಸಾಹದಿಂದ ಭಾಗವಹಿಸಿದ್ದರು.

ಇದರೊಂದಿಗೆ ಹುಬ್ಬಳ್ಳಿಯಲ್ಲಿನ ಮೂರು ಬಸ್ ಘಟಕಗಳು,ನವಲಗುಂದ ಮತ್ತು ಕಲಘಟಗಿ ಬಸ್ ಘಟಕ ಹಾಗೂ ವಿಭಾಗೀಯ ಕಾರ್ಯಾಗಾರದಲ್ಲಿ ಸಹ ಏಕ ಕಾಲದಲ್ಲಿ ಗೀತಗಾಯನ ಕಾರ್ಯಕ್ರಮ ಜರುಗಿತು. ಒಟ್ಟು ಐದು ನೂರಕ್ಕೂ ಹೆಚ್ಚು ನೌಕರರು ಧ್ವನಿಗೂಡಿಸಿದರು.

Edited By : Shivu K
Kshetra Samachara

Kshetra Samachara

28/10/2021 05:52 pm

Cinque Terre

13.15 K

Cinque Terre

0

ಸಂಬಂಧಿತ ಸುದ್ದಿ