ಧಾರವಾಡ : ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಕಡೆಗೆ ಹೆಚ್ಚಿನ ಒಲವು ತೋರುತ್ತಿರುವ ಜನತೆಯೇ ಮದ್ಯೆ ಹಳ್ಳಿ ಸೊಗಡಿನ ಕೌದಿ ಹೊಲೆಯುವ ಸ್ಪರ್ಧೆ ಏರ್ಪಡಿಸಿ, ಕೌದಿ ಅಂದರೆ ಮೂಗು ಮುರಿಯುವಂತವರು ಅದರತ್ತ ಆಕರ್ಷಿತರಾಗುವಂತೆ ಮಾಡಲು ವೇದಿಕೆಯಾಗಿದ್ದು ನಗರದ ರಾ.ಹ.ದೇಶಪಾಂಡೆ ಸಭಾಭವನ.
ಹಾಲಭಾವಿ ಸರ್ವದಾನ ಟ್ರಸ್ಟ್ ಹಾಗೂ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ, ಕೌದಿ ಹೊಲೆಯುವ ಸ್ಪರ್ಧೆಯಲ್ಲಿ ಮಹಿಳೆಯರು ತಾವೇ ಕೈಯ್ಯಾರೆ ಹೊಲೆದ ಕೌದಿಗಳನ್ನ ಪ್ರದರ್ಶಿಸುತ್ತಿದ್ದರು. ಭಿನ್ನ ವಿಭಿನ್ನ ರೀತಿಯಲ್ಲಿ ಚಿತ್ತಾರದ ಮೂಲಕ ಕೌದಿಗಳನ್ನು ಹೊಲೆದು ತಂದಿದ್ದ ಮಹಿಳೆಯರು ಪ್ರದರ್ಶನ ಮಾಡಿದರು.
ಇನ್ನೂ ಈ ಮೂಲಕ ಅಳಿದುಳಿದ ಬಟ್ಟೆ ಉಪಯೋಗಕ್ಕೆ ಬಾರದ ಬಟ್ಟೆಗಳನ್ನು ವ್ಯವಸ್ಥಿತವಾಗಿ ಹೊದಿಕೆ ಮಾಡಿ ಆಕರ್ಷಕ ರೂಪ ಕೊಟ್ಟು ಕೌದಿಯನ್ನು ಹೊಲಿಯುವಂತ ಮಹಿಳೆಯರು ಗ್ರಾಮೀಣ ಭಾಗದಲ್ಲಿ ಹೆಚ್ಚಿದ್ದಾರೆ ಅನುಪಯುಕ್ತವಾದ ವಸ್ತುಗಳು ಯಾವು ಇಲ್ಲಾ ಅವುಗಳಿಂದಲೂ ಹೊಸತನ್ನ ರಚಿಸಬಹುದು ಎಂಬುದನ್ನ ತೋರಿಸಿಕೊಟ್ಟವರು ಗ್ರಾಮೀಣ ಮಹಿಳೆಯರು ಆದ್ದರಿಂದ ಅವರನ್ನೆಲಾ ಮುನ್ನೆಲೆಗೆ ತಂದು ಅವರು ಹೊಲೆಯುವಂತ ಕೌದಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಿದ್ದೇವೆ ಎಂದು ಹಾಲಭಾವಿ ಸರ್ವದಾನ ಟ್ರಸ್ಟ್ ಮುಖ್ಯಸ್ಥರಾದ ಪಾರ್ವತಿ ಹಾಲಭಾವಿ ತಿಳಿಸಿದರು
Kshetra Samachara
22/10/2021 10:47 am