ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಭೂತಾಯಿಗೆ ಉಡಿ ತುಂಬಿದ ರೈತ ಸಮುದಾಯ

ಧಾರವಾಡ: ಸೀಗೆ ಹುಣ್ಣಿಮೆ ಎಂದರೆ ರೈತರಿಗೆ ಎಲ್ಲಿಲ್ಲದ ಸಡಗರ. ಹಸಿರು ಹೊದ್ದು ನಿಲ್ಲುವ ಭೂತಾಯಿಗೆ ಉಡಿ ತುಂಬಿ ಚರಗ ಚೆಲ್ಲುವುದೇ ಸೀಗೆ ಹುಣ್ಣಿಮೆ ವಿಶೇಷ.

ಇಂದು ನಾಡಿನಾದ್ಯಂತ ಸಂಭ್ರಮದಿಂದ ಸೀಗೆ ಹುಣ್ಣಿಮೆಯನ್ನು ಆಚರಿಸಲಾಗಿದೆ. ಧಾರವಾಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಭೂಮಿ ತಾಯಿಗೆ ಉಡಿ ತುಂಬಿ ಚರಗ ಚೆಲ್ಲಲಾಗಿದೆ.

ಕುಟುಂಬ ಸಮೇತರಾಗಿ ಹೊಲಗಳಿಗೆ ಹೋದ ರೈತ ಕುಟುಂಬ ಹೊಲಕ್ಕೆ ಪೂಜೆ ಸಲ್ಲಿಸಿ, ಕುಟುಂಬ ಸಮೇತರಾಗಿ ವಿಶೇಷ ಭೋಜನ ಸವಿದರು. ಹುರಕ್ಕಿ ಹೋಳಿಗೆ, ಖರ್ಚಿಕಾಯಿ, ಜೋಳದ ಕಡಬು, ಪುಂಡಿ ಪಲ್ಲೆ, ಕುಚ್ಚಿದ ಕಾರ ಸೀಗೆ ಹುಣ್ಣಿಮೆ ವಿಶೇಷ. ಈ ಎಲ್ಲ ವಿಶೇಷ ಖಾದ್ಯಗಳನ್ನು ಹೊಲಕ್ಕೆ ಕಟ್ಟಿಕೊಂಡು ಹೋಗಿ ರೈತ ಸಮುದಾಯ ಸವಿದು ಸಂಜೆವರೆಗೂ ಹೊಲದಲ್ಲಿ ಕಾಲ ಕಳೆದರು. ಚಿಣ್ಣರು ಹೊಲದಲ್ಲಿ ಆಟ ಆಡಿ ಖುಷಿಪಟ್ಟರು.

Edited By : Manjunath H D
Kshetra Samachara

Kshetra Samachara

20/10/2021 04:47 pm

Cinque Terre

56.53 K

Cinque Terre

0

ಸಂಬಂಧಿತ ಸುದ್ದಿ