ಕುಂದಗೋಳ : ಸಂತ ಶಿಶುನಾಳ ಶರೀಫರಿಗೆ ತನ್ನ ಮೂಗುತಿ ನೀಡಿ ಹೆಸರಾದ ತಾಯಿ ಗುಡಗೇರಿ ದ್ಯಾಮವ್ವನಿಗೆ ಈ ಶರನ್ನವರಾತ್ರಿ ಅಂಗವಾಗಿ ನಡೆಯುವ ಕಾರ್ಯಕ್ರಮ ದೀಪಗಳ ಬೆಳದಿಂಗಳ ಅಲಂಕಾರ ಇಡೀ ಕುಂದಗೋಳ ತಾಲೂಕಿಗೆ ಬೆಳಕು ಚೆಲ್ಲಿದೆ.
ಹೌದು ! ಪವಾಡರೂಪಿನಿ ತಾಯಿ ದ್ಯಾಮವ್ವನಿಗೆ ನವರಾತ್ರಿ ನಿಮಿತ್ತ ವಿಧ ವಿಧದ ಅಲಂಕಾರ ಮಾಡುತ್ತಿದ್ದು ಅದರಂತೆ ಇಂದು ಏಳನೇ ದಿನ ದುರ್ಗಾಷ್ಟಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿದ್ದು ಇಡೀ ದೇವಸ್ಥಾನದ ಆವರಣವೇ ಝಗ ಮಗ ಸೂಜಿಗ ಎನ್ನವಂತಾಗಿದ್ದು ಭಕ್ತ ಸಂಕುಲ ತಾಯಿ ದರ್ಶನಕ್ಕೆ ಸರದಿಯಲ್ಲಿ ನಿಂತಿದೆ.
ಕೋವಿಡ್ ಮಾರ್ಗಸೂಚಿ ನಿಯಮದ ಜೊತೆ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದು ಡೊಳ್ಳಿನ ಮೇಳದಲ್ಲಿ ತಾಯಿ ದ್ಯಾಮವ್ವನ ಪಲ್ಲಕ್ಕಿ ಉತ್ಸವ ಬಣ್ಣಿ ಮಹಾಕಾಳಿಗೆ ಪ್ರದಕ್ಷಿಣೆ ಹಾಕುತ್ತಿದ್ದು ತಾಯಿ ಆರಾಧನೆ ಭಕ್ತ ಸಂಕುಲ ತನು ಮನ ಧನದಿಂದ ಭಕ್ತಿ ಸೇವೆ ಮೆರೆಯುತ್ತಿದ್ದು ನೆರೆದ ಭಕ್ತಾಧಿಗಳು ಭಕ್ತಿ ಭಾವನೆ ಎರೆಡು ಪುನೀತವಾಗಿ ಶ್ರೀಕ್ಷೇತ್ರ ಗುಡಗೇರಿ ಪವಿತ್ರವಾಗಿದೆ.
Kshetra Samachara
13/10/2021 10:04 pm