ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಛಬ್ಬಿ ಗಣಪತಿಗೂ ತಟ್ಟಿದ ಕೊರೊನಾ ಬಿಸಿ : ಸರಳ ಆಚರಣೆಗೆ ಗ್ರಾಪಂ ಠರಾವ್...!

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಇತಿಹಾಸ ಪ್ರಸಿದ್ಧ ಛಬ್ಬಿ ಗಣೇಶನಿಗೂ ಕೊರೊನಾ ಶಾಕ್‌ ನೀಡಿದೆ. ತಾಲ್ಲೂಕಿನ ಛಬ್ಬಿ ಗಣೇಶನಿಗೆ ಐತಿಹಾಸಿಕ ಹಿನ್ನೆಲೆ ಇದೆ. ಗಣೇಶ ಚತುರ್ಥಿಯಿಂದ ಮೂರು ದಿನಗಳ ಕಾಲ ಕುಲಕರ್ಣಿ ಮನೆತನದವರು ಗಣೇಶನನ್ನು ಪ್ರತಿಷ್ಟಾಪನೆ ಮಾಡುತ್ತಿದ್ದರು. ಈ ಗಣೇಶ ಮೂರ್ತಿ ದರ್ಶನಕ್ಕೆ ರಾಜ್ಯ ಅಲ್ಲದೆ ಮಹಾರಾಷ್ಟ್ರ, ಗೋವಾ, ಆಂಧ್ರ ಸೇರಿದಂತೆ ಅನ್ಯ ರಾಜ್ಯಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ವಿಘ್ನೇಶ್ವರನ ದರ್ಶನ ಪಡೆಯುತ್ತಿದ್ದರು.

ಆದರೆ ಈ ಬಾರಿ ಛಬ್ಬಿ ಗಣೇಶ ಉತ್ಸವ ಕುಲಕರ್ಣಿ ಕುಟುಂಬಕ್ಕೆ ಮಾತ್ರ ಸೀಮಿತಗೋಳಿಸಿ ಗ್ರಾಮ ಪಂಚಾಯತಿ ಠರಾವ್ ಪಾಸ್ ಮಾಡಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಇಲಾಖೆಗೆ ಸಲ್ಲಿಸಿದೆ. ಕುಲಕರ್ಣಿ ಕುಟುಂಬ ಮನೆಯಲ್ಲಿಯೇ ಸರಳವಾಗಿ ಮೂರು ದಿನಗಳ ವರೆಗೆ ಗಣೇಶನನ್ನು ಪ್ರತಿಷ್ಟಾಪಿಸಿ ಗ್ರಾಮಸ್ಥರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿಘ್ನೇಶ್ವರನ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಹಾಗೂ ಸಾರ್ವಜನಿಕರು ಗ್ರಾಮ ಪ್ರವೇಶಕ್ಕೆ ತಡೆಯನ್ನು ನೀಡುವಂತೆ ಪೊಲೀಸ್ ಇಲಾಖೆಗೆ ಗ್ರಾಮ ಪಂಚಾಯತಿ ಮನವಿ ಮಾಡಿದೆ.

Edited By : Nirmala Aralikatti
Kshetra Samachara

Kshetra Samachara

09/09/2021 04:53 pm

Cinque Terre

23.97 K

Cinque Terre

0

ಸಂಬಂಧಿತ ಸುದ್ದಿ