ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಸವಣ್ಣಜ್ಜನವರ ಜಾತ್ರೆ ಜನಸಾಗರದ ನಡುವೆ ರಥೋತ್ಸವ

ಕುಂದಗೋಳ : ಪಟ್ಟಣದ ತ್ರಿವಿಧ ದಾಸೋಹಿ ಲಿಂಗೈಕ್ಯ ಕಲ್ಯಾಣಪುರ ಬಸವಣ್ಣನವರ ಜಾತ್ರಾ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆಯೇ ಲಿಂಗೈಕ್ಯ ಕಲ್ಯಾಣಪುರ ಬಸವಣ್ಣನವರ ಮೂರ್ತಿ ಹಾಗೂ ಪಕ್ಕದ ಬಸವೇಶ್ವರ ಕತೃ ಗದ್ದುಗೆಗೆ ಪೂಜಾಭಿಷೇಕ ನೆರವೇರಿತು.

ಸಾಯಂಕಾಲದ ವೇಳೆಗೆ ಮಹಾ ರಥೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆಯೂ ವಿವಿಧ ವಾದ್ಯ ಡೊಳ್ಳಿನ ಮೇಳಗಳ ಜೊತೆ ಅಭಿನವ ಕಲ್ಯಾಣಪುರ ಬಸವಣ್ಣನವರು ಹಾಗೂ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಮ್.ಎಸ್.ಅಕ್ಕಿ, ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು.

ಹರ ಹರ ಮಹಾದೇವ, ಕಲ್ಯಾಣಪುರ ಬಸವಣ್ಣನವರ ಮಾರಾಜಿ ಜೈ ಎಂಬ ಯುವಕರ ಘೋಷಣೆಗಳು ಜಾತ್ರಾ ಹುಮ್ಮಸ್ಸನ್ನು ಹೆಚ್ಚಿಸಿದವು.

ಜಾತ್ರೆಯಲ್ಲಿ ಮಕ್ಕಳ ಆಟೋಟಗಳು ಹಾಗೂ ಕುದುರೆ ನೃತ್ಯ, ಭಜನಾ ಪದಗಳು ಜನರನ್ನು ಮುದಗೊಳಿಸಿದವು. ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳಿಂದ ಭಕ್ತಾದಿಗಳು ಆಗಮಿಸಿ ಬಸವಣ್ಣಜ್ಜನವರ ದರ್ಶನ ಪಡೆದು ಕಡಬು, ಮಾದಲಿ ಜೊತೆ ರೊಟ್ಟಿ ಪಲ್ಯೇ ಅನ್ನ ಪ್ರಸಾದ ಸವಿದು ಪುನೀತರಾದರು.

Edited By : Manjunath H D
Kshetra Samachara

Kshetra Samachara

22/02/2021 09:56 pm

Cinque Terre

18.94 K

Cinque Terre

1

ಸಂಬಂಧಿತ ಸುದ್ದಿ