ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಂಗನವಮಿ ನಾಟಕೋತ್ಸವಕ್ಕೆ ಚಾಲನೆ

ಧಾರವಾಡ: ಧಾರವಾಡ ರಂಗಾಯಣದಲ್ಲಿ ಶನಿವಾರದಿಂದ ಪ್ರಾರಂಭವಾದ ರಂಗನವಮಿ ಒಂಬತ್ತು ದಿನಗಳ ನಾಟಕೋತ್ಸವವನ್ನು ಹೆಸರಾಂತ ರಂಗ ನಿರ್ದೇಶಕ ಮಂಡ್ಯ ರಮೇಶ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು, ಗಣಿ ಸಚಿವರಾದ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.

ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ, ರಂಗ ಸಮಾಜದ ಸದಸ್ಯರಾದ ಶಿವೇಶ್ವರಗೌಡ ಕಲ್ಲುಕಂಬ, ಸಿದ್ದರಾಮ ಹಿಪ್ಪರಗಿ, ಡಾ.ಬಾಳಣ್ಣ ಶೀಗಿಹಳ್ಳಿ, ರವಿ ಕುಲಕರ್ಣಿ, ಆಡಳಿತಾಧಿಕಾರಿ ಮಂಜುನಾಥ ಡೊಳ್ಳಿನ ಮತ್ತಿತರರು ಉಪಸ್ಥಿತರಿದ್ದರು.

ನಂತರ ಧಾರವಾಡ ರಂಗಾಯಣ ಕಲಾವಿದರು "ಅಕಸ್ಮಾತ್ ಹಿಂಗಾದ್ರ" ನಗೆ ನಾಟಕ ಪ್ರದರ್ಶಿಸಿದರು. ನಾಳೆ ಫೆ.21 ರಂದು ಕಲಬುರ್ಗಿ ರಂಗಾಯಣ ಕಲಾವಿದರು ಸಂಜೆ 6.30 ಕ್ಕೆ ಸಿರಿಪುರಂದರ ನಾಟಕ ಪ್ರದರ್ಶನ ಮಾಡುವರು.

Edited By : Vijay Kumar
Kshetra Samachara

Kshetra Samachara

20/02/2021 10:32 pm

Cinque Terre

8.31 K

Cinque Terre

0

ಸಂಬಂಧಿತ ಸುದ್ದಿ