ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಫೆ.22ಕ್ಕೆ ಕಲ್ಯಾಣಪುರ ಬಸವಣ್ಣಜ್ಜನ ಪುಣ್ಯಸ್ಮರಣೆ ರಥ

ಕುಂದಗೋಳ : ಸ್ಥಳೀಯ ಕಲ್ಯಾಣಪುರದ ತ್ರಿವಿಧ ದಾಸೋಹಿ ಪರಮ‌ಪೂಜ್ಯ ಬಸವಣ್ಣಜ್ಜನವರ 7ನೇ ಪುಣ್ಯಸ್ಮರಣೆ ಹಾಗೂ ರಥೋತ್ಸವ ಕಾರ್ಯಕ್ರಮ ಇದೇ ಫೆಬ್ರವರಿ ದಿ.22ರಂದು ಸೋಮವಾರ ಜರುಗಲಿದೆ. ಅಂದು ಬೆಳಿಗ್ಗೆ ಶ್ರೀ ಮಠದಲ್ಲಿರುವ ಕತೃ ನಂದೀಶನಿಗೆ ಹಾಗೂ ಪೂಜ್ಯ ಬಸವಣ್ಣಜ್ಜನವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಪೂಜೆ ಜರುಗಲಿದೆ. ನಂತರ ಬೆ.10 ಗಂಟೆಗೆ ರಾಷ್ಟ್ರೋತ್ಥಾನ ಸಂಸ್ಥೆಯಿಂದ ರಕ್ತದಾನ ಶಿಬಿರ ಆರೋಗ್ಯ ತಪಾಸಣೆ ನಡೆಯಲಿದೆ.

ಮಹಾ ಅನ್ನಪ್ರಸಾದ, ಸಂಜೆ 5 ಗಂಟೆಗೆ ಮಹಾ ರಥೋತ್ಸವ ಜರುಗುವುದು. ಈ ಕಾರ್ಯಕ್ರಮದ ನೇತೃತ್ವವನ್ನು ಪ. ಪೂ. ಅಭಿನವ ಬಸವಣ್ಣಜ್ಜನವರು ಕಲ್ಯಾಣಪೂರ ವಹಿಸಿಕೊಳ್ಳುವರು. ಸಾನಿದ್ಯವನ್ನು ಜ.ಪಕೀರ ಸಿದ್ದರಾಮ ಮಹಾಸ್ವಾಮಿಗಳು ಸಂಸ್ಥಾನ ಮಠ ಶಿರಹಟ್ಟಿ ವಹಿಸಿಕೊಳ್ಳಲಿದ್ದು, ಸ್ಥಳಿಯ ಪಂಚಗ್ರಹ ಹಿರೇಮಠದ ಷ.ಬ್ರ.ಶಿತಿಕಂಠೇಶ್ವರ ಶಿವಾಚಾರ್ಯರು, ಮುಳ್ಳೊಳ್ಳಿ,ವ.ಬೊಮ್ಮನಳ್ಳಿ ವಿರಕ್ತಮಠದ ಶ್ರೀ ಶಿವಯೋಗಿ ಶ್ವರ ಸ್ವಾಮೀಜಿ, ಸಂಶಿ ಬೃಹ್ಮಾನಂದ ಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು, ವಿರಕ್ತಮಠದ ಶ್ರೀ ಚನ್ನಬಸವದೇವರು ಉಪಸ್ಥಿತರಿರುವರು.

ದಿ.23 ರಂದು ಸಂಜೆ 5 ಗಂಟೆಗೆ ಕಡುಬಿನ ಕಾಳಗ ನಡೆಯುವುದು. 24 ರಂದು ಕಲ್ಯಾಣಪುರ ಶ್ರೀಮಠದ ಭಕ್ತರು, ಪೂಜ್ಯ ಶ್ರೀಗಳೊಟ್ಟಿಗೆ ಪಾದಯಾತ್ರೆ ಮೂಲಕ ಉಳವಿ ಕ್ಷೇತ್ರಕ್ಕೆ ತೆರಳಿ ಶ್ರೀ ಚನ್ನಬಸವಣ್ಣನ ದರ್ಶನಾಶೀರ್ವಾದ ಪಡೆಯುವರು.

ಈ ಮೂರು ದಿನಗಳ ಶ್ರೀಮಠದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಭಕ್ತರು ಕಡಬು, ಹೊಳಗೆ, ಮಾದಲಿ ಸಹಿತ ಇನ್ನಿತರ ಪ್ರಸಾದ ವ್ಯವಸ್ಥೆ ಕಲ್ಪಿಸಲಿದ್ದಾರೆ. ಸದ್ಬಕ್ಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಜ್ಜನ ದರ್ಶನಾಶೀರ್ವಾದ ಪಡೆದುಕೊಳ್ಳುವಂತೆ ಪ್ರಕಟಣೆ ಕೋರಿದೆ.

Edited By : Nirmala Aralikatti
Kshetra Samachara

Kshetra Samachara

10/02/2021 09:20 am

Cinque Terre

35.01 K

Cinque Terre

8

ಸಂಬಂಧಿತ ಸುದ್ದಿ