ಕುಂದಗೋಳ : ತಾಲೂಕಿನ ಬೆನಕನಹಳ್ಳಿಯ ಎಕೈಕ ಬಲ್ಮೂರಿ ಗಣೇಶನಿಗೆ ಸಂಕಷ್ಟಿ ಚತುರ್ಥಿ ನಿಮಿತ್ತವಾಗಿ ಹಿಂಗಾರು ಬೆಳೆಗಳ ಪೈರಿನ ವಿಶೇಷ ಪೂಜೆ ನೆರವೇರಿತು.
ಗೋಧಿ, ಜೋಳ, ಕುಸುಬೆ ಗಿಡಗಳನ್ನು ಸಂಕಷ್ಟಿ ಅಂಗವಾಗಿ ಗಣೇಶನಿಗೆ ಸಮರ್ಪಿಸಿ ಹಿಂಗಾರು ಬೆಳೆ ಉತ್ತಮ ಫಸಲು ವೃದ್ಧಿಸಲೇಂದು ಅರ್ಚಕರು ಪೂಜೆ ಸಲ್ಲಿಸಿ ಗಣೇಶನಿಗೆ ಗುಲಾಬಿ ಹೂಗಳ ಅಲಂಕಾರ ಕೈಗೊಂಡರು.
ಕೊರೊನಾ ನಂತರದಲ್ಲಿ ನೂತನ ವರ್ಷಕ್ಕೆ ತೆರೆದಿರುವ ಬಲ್ಮೂರಿ ಗಣೇಶನ ದರ್ಶನಕ್ಕೆ ತಾಲೂಕಿನ ಭಕ್ತರ ದಂಡು ಮಹಿಳೆಯರು ಮಕ್ಕಳು ಆಗಮಿಸಿ ದರ್ಶನ ಪಡೆದು ಪುನೀತರಾದರು.
Kshetra Samachara
31/01/2021 05:47 pm