ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಹಶೀಲ್ದಾರ ಕಚೇರಿಯಲ್ಲಿ 72ನೇಯ ಗಣರಾಜ್ಯೋತ್ಸವ ಆಚರಣೆ

ಕುಂದಗೋಳ : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ 72ನೇಯ ಗಣ ರಾಜ್ಯೊತ್ಸವವನ್ನು ಶಾಸಕಿ ಕುಸುಮಾವತಿ ಶಿವಳ್ಳಿಯವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಬಸವರಾಜ ಮೆಳವಂಕಿ ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ ಸ್ವಾತಂತ್ರ್ಯ ಭಾರತ ಗಣರಾಜ್ಯವಾದ ಈ ಸುದಿನ ನಮ್ಮ ಹೆಮ್ಮೆಯ ದಿನ ಎಂದರು. ಬಳಿಕ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ, ಉನ್ನತ ಮಟ್ಟದ ಶಿಕ್ಷಣ ಪಡೆಯುವಂತೆ ಪ್ರೇರೆಪಿಸಿದರು.

ಕಾರ್ಯಕ್ರಮದಲ್ಲಿ ಪಿ.ಎಲ್.ಡಿ‌ ಬ್ಯಾಂಕ್ ಅದ್ಯಕ್ಷ ಅರವಿಂದಪ್ಪ ಕಟಗಿ, ಪ.ಪಂ ಅದ್ಯಕ್ಷ ವಾಸು ಗಂಗಾಯಿ, ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ.ಡಿ.ಘೋರ್ಪಡೆ ಕರವೇ ಅದ್ಯಕ್ಷ ಕಲ್ಲಪ್ಪ ಹರಕುಣಿ, ಕೆ.ಬಿ.ಕೋರಿ, ಅಂಜುಮನ್ ಸಂಸ್ಥೆಯ ಅದ್ಯಕ್ಷ ರಾಜೇಸಾಬ್ ಕಳ್ಳಿಮನಿ, ತಾಲೂಕು ಕಚೇರಿಯ ಆಡಳಿತ ವರ್ಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕುಂದಗೋಳ ಗ್ರಾಮೀಣ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಜಕ್ಲಿ ಗಣರಾಜ್ಯೋತ್ಸವದ ಪೊಲೀಸ್ ಪರೇಡ್ ನಡೆಸಿಕೊಟ್ಟರು.

Edited By : Nagesh Gaonkar
Kshetra Samachara

Kshetra Samachara

26/01/2021 04:08 pm

Cinque Terre

33.37 K

Cinque Terre

0

ಸಂಬಂಧಿತ ಸುದ್ದಿ