ಧಾರವಾಡ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಅದ್ಧೂರಿ ಸ್ವಾಗತ ಕೋರಲಾಗುತ್ತಿದೆ. ನಾಳೆ ನಾಡಿನಾದ್ಯಂತ ಮಕರ ಸಂಕ್ರಾಂತಿ ಆಚರಿಸಲಾಗುತ್ತಿದ್ದು, ಅದರ ಮುನ್ನಾ ದಿನವಾದ ಬುಧವಾರ ಧಾರವಾಡದ ಸಪ್ತಾಪುರದಲ್ಲಿರುವ ಮೇರು ಕೋಚಿಂಗ್ ಸೆಂಟರ್ ನಲ್ಲಿ ಮಕರ ಸಂಕ್ರಾಂತಿಗೆ ಸ್ವಾಗತ ಕೋರಲಾಯಿತು.
ಕೋಚಿಂಗ್ ಸೆಂಟರ್ ನ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಾಂಪ್ರದಾಯಿಕ ಉಡುಗೆ ತೊಟ್ಟು ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದರು. ಹೊಸ ವರ್ಷದ ಮೊದಲ ಹಬ್ಬ ಇದಾಗಿರುವುದರಿಂದ ಈ ಹಬ್ಬವನ್ನು ಸಾಂಪ್ರದಾಯಿಕವಾಗಿಯೇ ಬರ ಮಾಡಿಕೊಳ್ಳಲಾಯಿತು.
Kshetra Samachara
13/01/2021 01:35 pm