ಕಲಘಟಗಿ:ಪಟ್ಟಣದ ಗುಡ್ ನ್ಯೂಸ್ ವೆಲ್ಫೇರ್ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಮತ್ತು ಯುವ ಸಪ್ತಾಹವನ್ನು ಆಯೋಜಿಲಾಗಿತ್ತು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ್ಪಾರ್ಪಣೆ ಮಾಡುವ ಮೂಲಕ ಯುವ ಸಪ್ತಾಹವನ್ನು ಉದ್ಘಾಟಿಸಲಾಯಿತು.
ಪ್ರಾಂಶುಲರಾದ ಡಾ : ಬಿ.ಜಿ.ಬಿರಾದಾರ ಅಧ್ಯಕ್ಷೆ ವಹಿಸಿ ಮಾತನಾಡಿ,ವಿವೇಕಾನಂದರು ಅಮೇರಿಕಾದಲ್ಲಿ 1893 ರಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ ಕುರಿತು ತಿಳಿಸಿ,ಸ್ವಾಮಿ ವಿವೇಕಾನಂದರು ಭಾರತದ ಅಪ್ರತೀಮ ವ್ಯಕ್ತಿತ್ವ ಹೊಂದಿದ ವ್ಯಕ್ತಿಯಾಗಿದ್ದರು,ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದರು.ಇಂದಿನ ಯುವಕರು ವಿವೇಕಾನಂದರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಡಾ: ಎಂ.ಡಿ.ಹೊರಕೇರಿ, ಶಾಂತಲಾ ನಾಯಕ, ಎಸ್.ಎಸ್.ಸುತಗಟ್ಟಿ,ಕೆ.ಎ.ನದಾಫ,ಎಂ.ಬಿ.ಉಳ್ಳಾಗಡ್ಡಿ,ಜಾಕೀಯಾ ಸೌದಾಗರ ಉಪಸ್ಥಿತರಿದ್ದರು.
Kshetra Samachara
12/01/2021 03:42 pm