ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಸುಗಲ್ ಗ್ರಾಮದ ಮಾರುತಿ ನಗರದಲ್ಲಿ ಅಯ್ಯಪ್ಪ ಸ್ವಾಮಿ ವಿಶೇಷ ಪೂಜೆ

ಹುಬ್ಬಳ್ಳಿ- ಸಂಕ್ರಮಣ ಮಾಸದ ಹಿನ್ನೆಲೆಯಲ್ಲಿ, ಕುಸುಗಲ್ ಗ್ರಾಮದ ಮಾರುತಿ ನಗರದಲ್ಲಿ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಹೌದು,,,, ಸಂಕ್ರಮಣ ಮಾಸದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತರು, ಅಯ್ಯಪ್ಪನ ದರ್ಶನ ಪಡೆಯಲು ಮಾಲೆ ಧರಿಸಿ, 48 ದಿನಗಳ ಕಾಲ ಕಟ್ಟುನಿಟ್ಟಿನ ವ್ರತ ಮಾಡಿದ್ದು, ಆದರೆ ಈ ವರ್ಷ ಅಯ್ಯಪ್ಪ ದರ್ಶನಕ್ಕೆ ಅವಕಾಶ ಇಲ್ಲದೇ ಇರುವುದರಿಂದ, ಹುಬ್ಬಳ್ಳಿ ಶಿರೂರ ಪಾರ್ಕ್ ನಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಇಂದು ಕುಸುಗಲ್ ಗ್ರಾಮದ ಮಾರುತಿ ನಗರದಲ್ಲಿ ಸಡಗರದಿಂದ ಅಯ್ಯಪ್ಪ ಸ್ವಾಮಿಯ ಮಡಿ ಪೂಜೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಶಬರಿಮಲೆಯಲ್ಲಿನ ಮೆಟ್ಟಿಲುಗಳಿಗೆ ಪೂಜೆ ಸಲ್ಲಿಸುವಂತೆ ಇಲ್ಲಿಯೂ ಕೂಡಾ ಮೆಟ್ಟಿಲುಗಳಿಗೆ ಪೂಜೆ ಸಲ್ಲಿಸಿ, ಅಯ್ಯಪ್ಪನ ಭಜನೆ ಮಾಡಿದರು. ಇದೆ ವೇಳೆ ನೂರಾರು ಅಯ್ಯಪ್ಪ ಮಾಲಾಧಾರಿಗಳು ಹಾಗೂ ಗ್ರಾಮದ ಗುರು ಹಿರಿಯರು ಯುವಕರು ಭಾಗಿಯಾಗಿದ್ದರು..

Edited By : Nagesh Gaonkar
Kshetra Samachara

Kshetra Samachara

10/01/2021 12:04 pm

Cinque Terre

34.89 K

Cinque Terre

0

ಸಂಬಂಧಿತ ಸುದ್ದಿ