ಅಣ್ಣಿಗೇರಿ : ಪಟ್ಟಣದ ಆರಾಧ್ಯ ದೈವ ಹಾಗೂ ದಕ್ಷಿಣದ ಕಾಶೀ ಎಂದೇ ಪ್ರಸಿದ್ಧಿ ಪಡೆದ ಶ್ರೀ ಅಮೃತೇಶ್ವರ ಮಹಾರಥೋತ್ಸವವು ಮಂಗಳವಾರ ಸಹಸ್ರಾರು ಭಕ್ತರ ಮಧ್ಯ ಕೋವಿಡ19 ರ ನಿಯಮಾವಳಿ ಪಾಲಿಸುವ ಮೂಲಕ ಜರುಗಿತು.
ದೇವಸ್ಥಾನದಲ್ಲಿ ಶ್ರೀ ಅಮೃತ ಲಿಂಗನಿಗೆ ಪೂಜೆ ಕೈಂಕರ್ಯಗಳನ್ನು ನೇರವೆರಿಸುವ ಮೂಲಕ ಜಾತ್ರೆಯನ್ನು ಆಚರಿಸಲಾಯಿತು. ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರಿಗೂ ಮಾಸ್ಕ. ಸ್ಯಾನಿಟೇಷನ್ ಮಾಡುವ ಮೂಲಕ ಸಾಮಾಜಿಕ ಅಂತರವನ್ನು ಅಳವಡಿಸಲಾಗಿತ್ತು.
ಮಹಾರಥೋತ್ಸವಕ್ಕೆ ಸ್ಥಳೀಯ ದಾಸೋಹ ಮಠದ ಶಿವಕುಮಾರ ಮಹಾಸ್ವಾಮೀಜಿ. ಕಮಲಾಪೂರ ದರ್ಗಾದ ಸಜ್ಜಾದ ಖಾದ್ರಿ ಪೀರಾ. ಡಾ.ಎ.ಸಿ.ವಾಲಿ ಮಹಾರಾಜ ಚಾಲನೆ ನೀಡಿದರು.
Kshetra Samachara
29/12/2020 09:49 pm