ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ದತ್ತ ಜಯಂತಿ ಅಂಗವಾಗಿ ದತ್ತಾತ್ರೇಯನಿಗೆ ಪೂಜಾಭಿಷೇಕ

ಕುಂದಗೋಳ : ದತ್ತ ಜಯಂತಿ ಅಂಗವಾಗಿ ಪಟ್ಟಣದ ಮಾರ್ಕೆಟ್'ನಲ್ಲಿರುವ ದತ್ತಾತ್ರೇಯನಿಗೆ ವಿಶಿಷ್ಟ ಪೂಜೆ ಹೂಗಳ ಅಲಂಕಾರ ಮಾಡಲಾಗಿದ್ದು, ದತ್ತಾತ್ರೇಯನಿಗೆ ಬೆಳಿಗ್ಗೆ ಪೂಜಾಭಿಷೇಕ ನೆರವೇರಿಸಿ ದೇವಸ್ಥಾನವನ್ನು ತಳಿರು ತೋರಣದಿಂದ ಶೃಂಗರಿಸಲಾಗಿದೆ. ಈಗಾಗಲೇ ಅಪಾರ ಭಕ್ತರು ದರ್ಶನ ಪಡೆದಿದ್ದಾರೆ.

ಇಂದು ಸಂಜೆ 7 ಗಂಟೆಗೆ ದತ್ತ ಮಂದಿರದಲ್ಲಿ ತೊಟ್ಟಿಲು ಪೂಜೆ ಜರುಗಲಿದ್ದು, ಕುಂದಗೋಳ ಪಟ್ಟಣದ ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಈ ವೇಳೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

Edited By : Manjunath H D
Kshetra Samachara

Kshetra Samachara

29/12/2020 07:42 pm

Cinque Terre

31.77 K

Cinque Terre

0

ಸಂಬಂಧಿತ ಸುದ್ದಿ