ಕಲಘಟಗಿ:ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶಿವಪ್ಪ ಪಕೀರಪ್ಪ ಹೊಸ್ಮನಿ ಹಾಗೂ ಉಪಾಧ್ಯಕ್ಷರಾಗಿ ಬಸಲಿಂಗಯ್ಯ ರುದ್ರಯ್ಯ ಹಿರೇಮಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಠಧ್ಯಕ್ಷರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥಗೌಡ ಮುರಳ್ಳಿ ,ಮಾಜಿ ಎಪಿಎಂಸಿ ಅಧ್ಯಕ್ಷರಾದ ರಜನಿಕಾಂತ್ ಬಿಜವಾಡ,ಎಸ್ ವಿ ಹೊನ್ನಳ್ಳಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಲಘಟಗಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಜ್ಮತ್ ಜಾಗಿರದಾರ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ,ಗುರು ಬೆಂಗೇರಿ,ಆನಂದ ಲಮಾಣಿ,ಮಾಂತಯ್ಯ ಸುರಶೆಟ್ಟಿಕೊಪ್ಪ ಉಪಸ್ಥಿತರಿದ್ದರು.
Kshetra Samachara
28/09/2020 08:15 pm