ನವಲಗುಂದ : ನಾಡ ಹಬ್ಬಕ್ಕೆ ನಾಡಿನೆಲ್ಲಡೆ ದಸರಾ ಸಂಭ್ರಮ ಮುಗಿಲು ಮುಟ್ಟಿದೆ. ಸಡಗರ ಸಂಭ್ರಮದಲ್ಲೇ ಜನತೆ ಮುಳುಗಿದೆ. ಈ ಹಿನ್ನೆಲೆ ಇಂದು ನಡೆಯುತ್ತಿರುವ ಆಯುಧ ಪೂಜೆ ನಿಮಿತ್ತ ನವಲಗುಂದ ತಾಲೂಕಿನ ಬೆಳಹಾರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಸರಾ ಹಬ್ಬವನ್ನು ಆಯುಧ ಪೂಜೆ ಹಾಗೂ ವಾಹನ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚೆನ್ನವ್ವ ಬೀರಣ್ಣವರ್, ಉಪಾಧ್ಯಕ್ಷೆ ಹಾಗೂ ಪ್ರಭಯ್ಯ ಮಠಪತಿ, ರುದ್ರಪ್ಪ ಬಳಗಲಿ, ಭೀಮರೆಡ್ಡಿ ನೀಲಗುಂದ, ಸಿಬ್ಬಂದಿ ವರ್ಗ ಮಂಜುನಾಥ ಬೆನ್ನಿ, ಶಿವು ದೇಸಾಯಿ, ಗುರಬಸವ್ವ ಚಲವಾದಿ, ಉಡಚಪ್ಪ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಜಿಯಾಗಿದ್ದರು.
Kshetra Samachara
04/10/2022 12:11 pm