ನವಲಗುಂದ : ನವಲಗುಂದ ಪಟ್ಟಣದಲ್ಲಿ ಇಂದಿನಿಂದ ಶ್ರೀ ಶಂಕರಾಚಾರ್ಯರ ಉತ್ಸವವನ್ನು ಮುಂದಿನ ಆರು ದಿನಗಳವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವ ಮೂಲಕ ಉತ್ಸವವನ್ನು ನೆರವೇರಿಸಲಾಗುತ್ತದೆ. ಇದರ ಅಂಗವಾಗಿ ಇಂದು ಪಟ್ಟಣದಲ್ಲಿ ಶೋಭಾಯಾತ್ರೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಇನ್ನು ಪ್ರಥಮ ದಿವಸ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿಗಳಿಂದ ಪ್ರವಚನ, ಎರಡನೆಯ ದಿವಸ ನಗರ ಭೂಮಾಪನ ಅಧಿಕಾರಿಗಳಾದ ಶ್ರೀ ಪುರೋಹಿತ ಅವರಿಂದ ಸಂಗೀತ ಕಾರ್ಯಕ್ರಮ, ಮೂರನೇ ದಿನ ಶ್ರೀ ದಿಗಂಬರ ಶಾಸ್ತ್ರಿಗಳಿಂದ ಕೀರ್ತನೆ, ನಾಲ್ಕನೇ ದಿವಸ ಶ್ರೀ ವೆಂಕಟೇಶ್ ಕುಲಕರ್ಣಿ ಗದಗ ಇವರಿಂದ ಸಂಗೀತ, ಐದನೇ ದಿವಸ ಡಾ ಭೀಮಾಶಂಕರ ಜೋಶಿ ಕುಡಲಗಿ ಇವರಿಂದ ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲ ಕಾರ್ಯಕ್ರಮಗಳನ್ನು ಶ್ರೀ ಶಂಕರ ಮಠದ ಸಭಾಂಗಣದಲ್ಲಿ ನಡೆಯುತ್ತವೆ ಎಂದು ಯುವ ವೇದಿಕೆಯ ಸಂಜಯ ಜೋಶಿಯವರು ತಿಳಿಸಿದ್ದಾರೆ.
Kshetra Samachara
11/05/2022 05:36 pm