ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆ ಅಂದರೆ ಅದಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಈ ಜಾತ್ರೆಯಲ್ಲಿ ಸಾಂಸ್ಕೃತಿಕ- ಜಾನಪದ ಕಲೆ, ಕ್ರೀಡೆಗಳಿಗೆ ಪ್ರೋತ್ಸಾಹ ಇದ್ದೇ ಇರುತ್ತದೆ. ಇಂತಹ ಮಹತ್ವದ ಆಚರಣೆಗೆ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಉಣಕಲ್ ಸಿದ್ಧಪ್ಪಜ್ಜನ ಜಾತ್ರೆ.
ಹೌದು... ಉಣಕಲ್ ಸಿದ್ದಪ್ಪಜ್ಜನ ಜಾತ್ರೆ ಅಂಗವಾಗಿ ನಡೆದ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಪೈಲ್ವಾನರ ಜಿದ್ದಾಜಿದ್ದಿಗೆ ಪ್ರೇಕ್ಷಕರು ಮನಸೋತರು. ಜಾತ್ರೆ ವೇಳೆ ಪ್ರತಿವರ್ಷವೂ ಕುಸ್ತಿ ಸ್ಪರ್ಧೆ ಆಯೋಜಿಸಲಾಗುತ್ತಿತ್ತು. ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸಹಿತ ರಾಜ್ಯ- ನೆರೆರಾಜ್ಯಗಳ ಕುಸ್ತಿಪಟುಗಳ ಪಟ್ಟುಗಳು ಗಮನ ಸೆಳೆದವು.
8 ವರ್ಷದ ಬಾಲಕರಿಂದ ಹಿಡಿದು ಪುರುಷರ ತನಕ ವಿವಿಧ ವಯೋಮಾನದ ಪೈಲ್ವಾನರಿಗೆ ಸ್ಪರ್ಧೆ ನಡೆದವು. ಉಣಕಲ್ ಗ್ರಾಮದ ಹಿರಿಯ ಪೈಲ್ವಾನರು ಹಾಗೂ ಕುಸ್ತಿಪ್ರೇಮಿಗಳು ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿ ಪಂದ್ಯ ಕಟ್ಟಿದರು. ಇದರಿಂದ ಪ್ರತಿ ಸ್ಪರ್ಧೆಯೂ ರಂಗೇರಿತ್ತು.
ಮೊದಲ ಬಹುಮಾನ 21 ಸಾವಿರ, ದ್ವಿತೀಯ 15 ಸಾವಿರ, ಮೂರನೇ 10 ಸಾವಿರ, ನಾಲ್ಕನೇ 5,000 ರೂ. ವಿಜೇತರಿಗೆ ನೀಡಲಾಯಿತು. ಚನ್ನು ಪಾಟೀಲ, ಸಿದ್ದಪ್ಪಜ್ಜ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ, ಸದಸ್ಯ ರಾಜಣ್ಣ ಕೊರವಿ ಪಾಲ್ಗೊಂಡಿದ್ದರು. ಮೊದಲ ಬಹುಮಾನವನ್ನು ಅಪ್ಪು ಪೈಲ್ವಾನ್ ಬೆಳಗಾವಿ ಪಡೆದರು.
ದ್ವಿತೀಯ ಸ್ಥಾನಕ್ಕೆ ಸೆಣಸಾಡಿದ ಕಾರ್ತಿಕ್ ಇಂಗಳಗಿ ಹಾಗೂ ಪರಶುರಾಮ ನಡುವೆ ಸಮಕುಸ್ತಿಯಾಗಿತು. 3ನೇ ಬಹುಮಾನವನ್ನು ಸುನಿಲ್ ಪೈಲ್ವಾನ್ ಪಡೆದರು. 4ನೇ ಬಹುಮಾನಕ್ಕೆ ಧ್ರುವ ಕೋಟಿ ಉಣಕಲ್ ಮತ್ತು ಲಿಂಗರಾಜ ಬೊಮ್ಮನಹಳ್ಳಿ ಮಧ್ಯೆ ರೋಚಕ ಪಂದ್ಯ ಏರ್ಪಟ್ಟಿತು. ಆದರೆ, ಫಲಿತಾಂಶ ಸಮಕುಸ್ತಿಯಾಗಿ ಹೊರ ಬಿತ್ತು.
Kshetra Samachara
07/04/2022 07:36 pm