ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಳಿಯುತ್ತಿರುವ ಗೀಗೀ ಪದಗಳಿಗೆ ವೇದಿಕೆ ಹೋಳಿ ಹುಣ್ಣಿಮೆ

ಕುಂದಗೋಳ: ಹೋಳಿ ಹಬ್ಬ ಬಂದರೆ ಸಾಕು ಬಣ್ಣದೋಕುಳಿ, ಕೇಕೆ ಚಪ್ಪಾಳೆ, ಸಿಳ್ಳೆ, ಕುಣಿತ, ಡಿಜೆ ಸಾಂಗ್ಸ್ ಹಾವಳಿಗಳ ನಡುವೆ ಇಲ್ಲೊಂದು ಗ್ರಾಮ ಪ್ರತಿ ವರ್ಷ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ.

ಹೌದು! ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮವೇ, ಇಂತಹದ್ದೊಂದು ಕಾರ್ಯಕ್ರಮ ಮಾಡುತ್ತಾ ಕಳೆದ ಹಲವಾರು ವರ್ಷಗಳಿಂದ ಹೆಸರುವಾಸಿಯಾಗಿ, ಪ್ರತಿ ವರ್ಷ ಹೋಳಿ ಹುಣ್ಣಿಮೆ ನಿಮಿತ್ತವಾಗಿ ಗೀಗೀ ಪದಗಳನ್ನು ಏರ್ಪಡಿಸಿ ಗ್ರಾಮೀಣ ಕಲೆ ಉಳಿಸುತ್ತಿದೆ.

ಅದರಂತೆ ಮೋಜಿನ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಕಂಬಾಗಿಯ ಜೈ ಹನುಮಾನ್ ಪರದೇಶಿ ಗೀಗೀ ಪದ ತಂಡ ಹಾಗೂ ತೇಲಸಂಗದ ಶ್ರೀ ದುರ್ಗಾದೇವಿ ನಾಗೇಶ್ ಗೀಗೀ ಪದ ಕಲಾ ತಂಡಗಳು ರಾತ್ರಿ ಇಡೀ ಗೀಗೀ ಪದಗಳನ್ನು ಹಾಡಿ ರೈತಾಪಿ ಜನರನ್ನು ರಂಜಿಸಿದರು.

ನಿತ್ಯ ಕೃಷಿ ಕಾಯಕದಲ್ಲಿ ತೊಡಗಿದ್ದ ರೈತಾಪಿ ಜನರಿಗೆ ಮನರಂಜನೆ ಜೊತೆ ಅಳಿಯುತ್ತಿರುವ ಜಾನಪದ ಕಲೆ ಗಿಗೀಪದಗಳಿಗೆ ವೇದಿಕೆಯನ್ನು ಸಹ ಗುಡೇನಕಟ್ಟಿ ಗ್ರಾಮಸ್ಥರು ಕಲ್ಪಿಸಿದರು.

Edited By : Nagesh Gaonkar
Kshetra Samachara

Kshetra Samachara

19/03/2022 03:42 pm

Cinque Terre

21.67 K

Cinque Terre

0

ಸಂಬಂಧಿತ ಸುದ್ದಿ