ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗಣೇಶ ಹಬ್ಬಕ್ಕೆ ಧ್ವನಿ ಮತ್ತು ಬೆಳಕಿಗೆ ಅವಕಾಶ ನೀಡಲು ಒತ್ತಾಯ

ಗಣೇಶ ಹಬ್ಬದಂದು ಧ್ವನಿ ಮತ್ತು ಬೆಳಕಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ಧ್ವನಿ ಬೆಳಕು ಜನರೇಟರ್ ಮತ್ತು ಎಲ್‌ಇಡಿ ವಾಲ್ ಸಂಘದ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೊರೊನಾ ಮಹಾಮಾರಿಯಿಂದಾಗಿ ಧ್ವನಿ ಮತ್ತು ಬೆಳಕಿನ ವ್ಯಾಪಾರಸ್ಥರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಎರಡು ಸಾವಿರ ಜನ ಇದೇ ಉದ್ಯೋಗದಿಂದ ಜೀವನೋಪಾಯ ಕಂಡುಕೊಂಡಿದ್ದಾರೆ. ಕೆಲಸ ಇಲ್ಲದೇ ಎರಡು ವರ್ಷಗಳಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸರ್ಕಾರ ಈ ಬಾರಿಯಾದರೂ ಧ್ವನಿ ಮತ್ತು ಬೆಳಕಿಗೆ ಅವಕಾಶ ಕೊಡುತ್ತದೆ ಎಂದು ಭಾವಿಸಿದ್ದೆವು. ಆದರೆ, ಇದಕ್ಕೂ ಈಗ ಸರ್ಕಾರ ಕಲ್ಲು ಹಾಕಿದೆ. ಸರ್ಕಾರ ಕೂಡಲೇ ನಿಯಮ ಸಡಿಲಿಸಿ ಧ್ವನಿ ಮತ್ತು ಬೆಳಕಿಗೆ ಅವಕಾಶ ನೀಡಬೇಕು. ಜಿಲ್ಲಾಡಳಿತ ಹಾಕುವ ಎಲ್ಲಾ ಷರತ್ತುಗಳನ್ನು ಪಾಲಿಸುತ್ತೇವೆ ಎಂದು ಸಂಘದ ಸದಸ್ಯರು ಮನವಿ ಮಾಡಿದ್ದಾರೆ.

Edited By :
Kshetra Samachara

Kshetra Samachara

20/08/2022 04:52 pm

Cinque Terre

26.65 K

Cinque Terre

0

ಸಂಬಂಧಿತ ಸುದ್ದಿ