ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಿದ್ದರಾಮೇಶ್ವರರ ಜಯಂತಿ ಆಚರಣೆ ಅರ್ಥಪೂರ್ಣ; ಮುಖ್ಯಾಧಿಕಾರಿ ವಿರೇಶ್ ಹಸಬಿ

ನವಲಗುಂದ : ಪಟ್ಟಣದ ಸಿದ್ದರಾಮೇಶ್ವರ ನಗರದ ಭೋವಿ ವಡ್ಡರ ಸಮುದಾಯ ಭವನ ಹಾಗೂ ಬಸವೇಶ್ವರ ನಗರದಲ್ಲಿ ತಾಲೂಕಾ ಭೋವಿವಡ್ಡರ ಸಮಾಜದ ವತಿಯಿಂದ ಸಿದ್ದರಾಮೇಶ್ವರ ಜಯಂತಿ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿರೇಶ್ ಹಸಬಿ ಮಾತನಾಡಿ, ಜನವರಿ 14ರಂದು ಸಿದ್ಧರಾಮೇಶ್ವರರು ಬಸವತತ್ತ್ವದ ವೈಚಾರಿಕ ಚಿಂತನೆಯಲ್ಲಿ ಅರಳಿದ ಅವರು, ಉಪದೇಶಿಸಿರುವ ಜ್ಞಾನ ಸಂದೇಶಗಳನ್ನು ಅವಲೋಕನ ಮಾಡಿಕೊಳ್ಳುವುದರ ಮೂಲಕ ಅವುಗಳನ್ನು ತನುಮನಗಳಲ್ಲಿ ಕ್ರಿಯಾತ್ಮಕವಾಗಿ ರೂಪಿಸಿಕೊಳ್ಳುವ ಪ್ರಯತ್ನದೊಂದಿಗೆ ಅವರಿಗೆ ಸಲ್ಲಿಸುವ ನಮನ ನಿಜಕ್ಕೂ ಅರ್ಥಪೂರ್ಣ ಎನಿಸುತ್ತದೆ ಎಂದರು.

ಪುರಸಬೆಯ ಸ್ಥಾಯಿಸಮಿತಿಯ ಚೇರಮನ್ ಬಸವರಾಜ ಕಟ್ಟಿಮನಿ ಸದಸ್ಯರಾದ ಮಹಾಂತೇಶ್ ಕಲಾಲ್, ಪರಿದಾಬೇಗಂ ಬಬರ್ಚಿ, ದೇವಪ್ಪ ದತ್ತವಾಡಕರ, ಪರಶುರಾಮ ವಡ್ಡರ, ಜೊಲ್ಲಪ್ಪ ಬೆಳವಟಗಿ, ಹುಲಗಪ್ಪ ವಡ್ಡರ, ಪರಶುರಾಮ ದೊಡ್ಡಮನಿ, ಶೆಖಪ್ಪ ಬೆಳವಟಗಿ, ಮಾರುತಿ ಬೆಳವಟಗಿ, ಸುಂಕಪ್ಪ ವಡ್ಡರ, ತಿರುಪತಿ ದೊಡಮನಿ, ರವಿ ವಿಶ್ವಜ್ಞ, ಹನುಮಂತಪ್ಪ ಬೆಳವಟಗಿ, ದಯಾನಂದ ಶಿರೋಳ್ , ಮಹಾಂತೇಶ್ ತೋಟಿ, ಬಸನಗೌಡ ಪಾಟೀಲ್ ಸಿದ್ದಪ್ಪ ಜನ್ನರ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/01/2022 09:13 pm

Cinque Terre

13.49 K

Cinque Terre

0

ಸಂಬಂಧಿತ ಸುದ್ದಿ