ನವಲಗುಂದ : ನೆಲ ಜಲ ಹಾಗೂ ಮಹದಾಯಿ ಕಳಸಾ ಬಂಡೂರಿ ಹೋರಾಟ ಮಾಡುತ್ತಾ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಬಸನಗೌಡ ಲಿಂಗನಗೌಡ ಪಾಟೀಲ್ ಅವರಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಒಲಿದು ಬಂದಿದೆ.
ಹೌದು ಚೇತನ್ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಇವರು ಬಸನಗೌಡ ಪಾಟೀಲ್ ಅವರ ಸಾಧನೆ ಗುರುತಿಸಿ, ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಆಯೋಜಿಸಲಾದ ಕಿತ್ತೂರು ಕರ್ನಾಟಕ ಉತ್ಸವದಲ್ಲಿ ಪ್ರಸಕ್ತ ಸಾಲಿನ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
Kshetra Samachara
28/12/2021 03:05 pm