ನವಲಗುಂದ : ಉತ್ತರ ಕರ್ನಾಟಕದ ಸಂಪ್ರದಾಯದಲ್ಲಿ ಹಿಂಗಾರು ಬೆಳೆ ರೈತನಿಗೆ ಹೆಚ್ಚಿನ ಪ್ರಮಾಣದಲ್ಲಿ ಬರಲಿ ಎಂದು ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಯುವಕರೊಂದಿಗೆ ಸೀಗೆ ಹುಣ್ಣಿಮೆ “ಹುಲ್ಲುಲ್ಲಿಗ್ಯೋ ಹುಲಾರಿಗ್ಯೋ” ಎಂಬ ವಾಕ್ಯದೊಂದಿಗೆ ನವಲಗುಂದ ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಚರಗ ಚಲ್ಲಿ ಭೂತಾಯಿಗೆ ಪ್ರಾರ್ಥನೆ ಸಲ್ಲಿಸಿದರು.
ಇನ್ನು ಇದೇ ವೇಳೆ ಶಿರೂರ ಗ್ರಾಮದ ಹಿರಿಯರು ಹಾಗೂ ಯುವಕರೊಂದಿಗೆ ಗ್ರಾಮದ ಬಾಳಿ ಅವರ ಹೊಲದಲ್ಲಿಯೇ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಪೂಜೆ ಸಲ್ಲಿಸಿ, ನಂತರ ಶೀಗೆ ಹುಣ್ಣಿಮೆ ಚರಗ ಚಲ್ಲುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಮಂಜು ಬಾಳಿ, ಸಂಗನಗೌಡ ತೋಟದ, ಮೌಲಾಸಾಬ ಹೂಲಿ, ಮಹಾಂತೇಶ ಬಾಳಿ, ಸಂಗಮೇಶ ಕಗದಾಳ, ಮುತ್ತು ಸಣ್ಮನಿ, ಮಲ್ಲು ನರಗುಂದ, ಮೌಲಾ ನದಾಫ, ವೀರಯ್ಯ ಹೆಬ್ಬಳ್ಳಿಮಠ, ಸಿದ್ದು ಯಲಿಗಾರ, ವೀರನಗೌಡ ಕರಡಿಗುಡ್ಡ, ಮಹಾದೇವಗೌಡ ಗುತ್ತನಗೌಡ್ರ, ಕಲ್ಲನಗೌಡ ಭೂಮಕ್ಕಗೌಡ್ರ, ಬಸವರಾಜ ಬಾಳಿ ಹಾಗೂ ಇತರರು ಉಪಸ್ಥಿತರಿದ್ದರು.
Kshetra Samachara
20/10/2021 04:36 pm