ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸೂರ್ಯಪುತ್ರನ ಜನ್ಮದಿನ ಕುಟುಂಬದವರಲ್ಲಿ ಸಂತಸ ಸಂಭ್ರಮ

ಕುಂದಗೋಳ : ಸೂರ್ಯ ಪುತ್ರನಿಗೆ ಎರೆಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕುಟುಂಬದವರು ಅಪ್ಪಟ ಸಂಪ್ರದಾಯ ಬದ್ಧವಾಗಿ ಮನೆ ಮಗನಂತೆ ಪೂಜೆ ಮಾಡಿ ಆರತಿ ಬೆಳಗಿ ಹೂ ಮಾಲೆ ಹಾಕಿ ಕೇಕ್ ಕತ್ತರಿಸಿ ಆತನ ಜನ್ಮದಿನ ಆಚರಣೆ ಮಾಡಿದ್ದಾರೆ.

ಅಬ್ಬಾ ! ಈ ಸೂರ್ಯಪುತ್ರನ ಜನ್ಮದಿನ ನೋಡಿದವರು ಆಶ್ಚರ್ಯ ಸಹ ಪಟ್ಟು ಇದು ಪ್ರೀತಿ, ಪ್ರೇಮ, ವಾತ್ಸಲ್ಯ ಎಂದು ಮಾತನಾಡುತ್ತಿದ್ದಾರೆ.

ಅರೆ ! ಯಾರಿ ಈ ? ಸೂರ್ಯಪುತ್ರ ಅಂದ್ರಾ ? ಇವನೇ ಸ್ವಾಮಿ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಹಣುಮಂತಪ್ಪ ದೊಡ್ಡರು ಎಂಬುವವರ ಮನೆಯಲ್ಲಿ ಜನಿಸಿದ ಹೋರಿ ಕರು, ಇದೀಗ ಈ ಸೂರ್ಯ ಪುತ್ರ ಎರೆಡು ವರ್ಷದವನಾಗಿದ ಹಿನ್ನೆಲೆಯಲ್ಲಿ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.

ಅದು ಥೇಟ್ ಮನುಷ್ಯರ ಜನ್ಮದಿನದಂತೆ ಈ ಕಾರ್ಯಕ್ರಮ ನೋಡಿ ಜನ ಬೇಷ್ ಎಂದಿದ್ದಾರೆ.

Edited By : Shivu K
Kshetra Samachara

Kshetra Samachara

04/02/2022 03:23 pm

Cinque Terre

25.99 K

Cinque Terre

1

ಸಂಬಂಧಿತ ಸುದ್ದಿ