ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಪೈಲ್ವಾನನ ಶಕ್ತಿ ಪ್ರದರ್ಶನಕ್ಕೆ ನಿಬ್ಬೆರಗಾದ ಜನ

ನವಲಗುಂದ: ಕಿಕ್ಕಿರಿದು ಸೇರಿದ್ದ ಜನ ಸಮೂಹ, ಎಲ್ಲೆಲ್ಲೂ ಹರ್ಷೋದ್ಘಾರ. ಕಲ್ಲೆತ್ತುವ ಪೈಲ್ವಾನನಿಗೆ ಹುರಿದುಂಬಿಸುವ ಯುವ ಪಡೆ, ಇಂತಹ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ನವಲಗುಂದ ತಾಲೂಕು ಪಡೆಸೂರು ಗ್ರಾಮದಲ್ಲಿನ ಅದ್ಭುತ ಶಕ್ತಿ ಪ್ರದರ್ಶನ.

ಹೌದು... ಗ್ರಾಮದ ಸರಕಾರ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಅದ್ಭುತ ಶಕ್ತಿ ಪ್ರದರ್ಶನದಲ್ಲಿ ವೀರೇಶ ಗುರಪ್ಪ ಅಂಗಡಿ ಎಂಬ ಪೈಲ್ವಾನ್ ತನ್ನ ಶಕ್ತಿ- ಸಾಹಸ ಪ್ರದರ್ಶಿಸಿದ್ದಾರೆ.

ಶಕ್ತಿ ಪ್ರದರ್ಶನದಲ್ಲಿ 45ಕೆಜಿಯಿಂದ 86 ಕೆಜಿ ಸಂಗ್ರಾಣಿ ಕಲ್ಲನ್ನ ಮಂಡಿಯೂರಿ ಸಿಡಿ ಎತ್ತುವದು, 1 ಕ್ವಿಂಟಾಲ್ ಮೇಲೆ 5 ಕೆಜಿ ಇರುವ 3 ಚೀಲ, ಕಲ್ಲಿನ ದುಂಡಿ, ಕಬ್ಬಿಣದ ಚಕ್ಕಡಿ ಅಚ್ಚು, ಉಸುಕಿನ ಕೊಡ, 35 ಹೆಚ್‌ಪಿ ಕಬ್ಬಿಣದ ನೇಗಿಲು ಹೆಗಲ ಮೇಲೆ ಹೊತ್ತು ಸಾಗುವುದು, 70ಕೆಜಿ ತೂಕದ ಚಕ್ಕಡಿ ಹಳಿಪಟ್ಟಿ ಮಂಡೆಉರಿ ಸಿಡಿ ಹೊಡೆಯುವದು, 4 ಚೀಲಗಳನ್ನ ಮೊಣಕಾಲಿನಿಂದ ಹಾಯಿಸಿ ಒಗೆಯುವುದು, 55ಕೆ.ಜಿ ಯಿಂದ 25ಕೆ.ಜಿ ವರೆಗಿನ 21 ಸಂಗ್ರಾಣಿ ಕಲ್ಲುಗಳನ್ನು 1 ನಿಮಿಷ ಎತ್ತುವ ಸಿಡಿಹೊಡೆಯುವುದರ ಮೂಲಕ ಹಳ್ಳಿ ಹೈದ ವೀರೇಶ್ ಗುರಪ್ಪ ಅಂಗಡಿ ಅದ್ಭುತ ಶಕ್ತಿ ಪ್ರದರ್ಶಿಸುವ ಮೂಲಕ ಯುವ ಜನತೆಯ ಕೇಕೆ ಸಿಳ್ಳೆಗೆ ಕಾರಣವಾಗಿದ್ದರು.

Edited By : Nagesh Gaonkar
Kshetra Samachara

Kshetra Samachara

08/05/2022 07:08 pm

Cinque Terre

29.6 K

Cinque Terre

1

ಸಂಬಂಧಿತ ಸುದ್ದಿ