ಹುಬ್ಬಳ್ಳಿ: ಅಂತೂ ಇಂತೂ ಕೇಂದ್ರ ಸರ್ಕಾರ, ಧಾರವಾಡ ಜಿಲ್ಲೆಯ ಸಾಹಿತ್ಯದ ಕೊಡುಗೆ ಸ್ಮರಿಸಿದೆ. ಜಿಲ್ಲೆಯ ಹೆಸರಾಂತ ಸಾಹಿತಿಗಳಿಗೆ ಗೌರವ ನೀಡಲು ಸರ್ಕಾರ ಮುಂದಾಗಿದ್ದು, ಅದ್ಧೂರಿ ಕಾರ್ಯಕ್ರಮದ ಮೂಲಕ ಧಾರವಾಡ ಜಿಲ್ಲೆಯ ಸಾಹಿತ್ಯದ ಕೊಡುಗೆಗೆ ಗೌರವ ಸಲ್ಲಿಸಿದೆ.
ಹಿಂದೂಸ್ತಾನಿ ಸಂಗೀತದ ಮೂಲಕ ದೇಶಾದ್ಯಂತ ಖ್ಯಾತರಾದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಜನಿಸಿದ ಪಂಡಿತ್ ಸವಾಯಿ ಗಂಧರ್ವರು ಹಿಂದೂಸ್ತಾನಿ ಸಂಗೀತ, ಖಯಾಲ್, ಠುಮ್ರಿ, ಭಜನೆ, ನಾಟಕದ ಮೂಲಕ ಕಲೆಗೆ ಸಾಕಷ್ಟು ಸೇವೆ ಸಲ್ಲಿಸಿದವರು. ಸವಾಯಿ ಗಂಧರ್ವರಿಗೆ ಈಗ ಭಾರತೀಯ ಅಂಚೆ ವಿಶೇಷ ಗೌರವ ಸಲ್ಲಿಸಿದೆ. ಹೌದು... ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡಿ ಧಾರವಾಡ ಜಿಲ್ಲೆಯ ಸಾಹಿತ್ಯದ ಕೊಡುಗೆಯನ್ನು ಗೌರವಿಸಿದೆ.
ಇನ್ನು, ಹುಬ್ಬಳ್ಳಿ ಮೈಲಿ ದೂರದಲ್ಲಿರುವ, ಕುಂದಗೋಳ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ಅಲ್ಲಿನ ಆಡಳಿತ ಭಾಷೆ ಮರಾಠಿ. ಇಂತಹ ಪರಿಸರದಲ್ಲಿ ಸವಾಯಿ ಗಂಧರ್ವರು ಜನಿಸಿದರು. ಅವರ ಬಾಲ್ಯದ ಹೆಸರು ರಾಮಚಂದ್ರ ಗಣೇಶ ಕುಂದಗೋಳಕರ್. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ.
ಬಾಲ್ಯದ ದಿನಗಳಲ್ಲಿ ರಾಮಚಂದ್ರ ಗಣೇಶರು, ಸ್ವಾಗತ ಗೀತೆ, ಪಲ್ಲಕ್ಕಿ ಸೇವೆ ಸಮಯದಲ್ಲಿ ಭಜನೆ ಇತ್ಯಾದಿ ಹಾಡುತ್ತಿದ್ದರು. ಬೆಳೆದಂತೆ ಹಿಂದೂಸ್ತಾನಿ ಸಂಗೀತಕ್ಕೆ ಅಪ್ರತಿಮ ಕೊಡುಗೆ ನೀಡಿದ್ದು, ಈಗ ಸರ್ಕಾರ ಈ ಮಹಾನ್ ಸಾಧಕರನ್ನು ಗುರುತಿಸಿ ಗೌರವಿಸಿರುವುದು ವಿಶೇಷವಾಗಿದೆ. ಧಾರವಾಡ ಜಿಲ್ಲೆಯ ಮತ್ತಷ್ಟು ಹಿರಿಯ ಕಲಾವಿದರಿಗೆ ಇಂತಹ ಗೌರವ ದೊರೆಯಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/10/2022 06:45 pm