ನವಲಗುಂದ : ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 888ನೇ ಜಯಂತೋತ್ಸವ ಕಾರ್ಯಕ್ರಮವನ್ನು ನವಲಗುಂದ ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಡಪದ ಸಮಾಜದ ಬಾಂಧವರೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನವಲಗುಂದ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗ್ರೇಡ 2 ತಹಶೀಲ್ದಾರರಾದ ಎಂ ಜೆ ಹೊಕ್ರಾಣಿ, ರಾಜೇಂದ್ರ ಬಹುಗುಣಿ, ಗಣೇಶ್ ಚಳ್ಳಕೆರೆ, ಶೋಭಾ ಮಲ್ಲಣ್ಣವರ ಹಾಗೂ ಹಡಪದ ಸಮಾಜದ ಅಧ್ಯಕ್ಷರಾದ ಸುರೇಶ್ ಹಡಪದ ಹಾಗೂ ಸಮಾಜದ ಬಾಂಧವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಯಾಲಯದ ಎಲ್ಲ ಸಿಬ್ಬಂದಿ ಭಾಗವಹಿಸಿದ್ದರು.
Kshetra Samachara
13/07/2022 12:58 pm