ನವಲಗುಂದ: ಕೈಮಗ್ಗ ಮತ್ತು ಸಕ್ಕರೆ ಖಾತೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ತಾಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಹಾಗೂ ಉದ್ದಿನಕಾಳು ಖರೀದಿ ಕೇಂದ್ರವನ್ನು ಸೋಮವಾರ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಗುರು-ಹಿರಿಯರು, ಎ.ಪಿ.ಎಂ.ಸಿ.ಅಧ್ಯಕ್ಷರಾದ ಯಲ್ಲಪ್ಪ ಅಕ್ಕಿ, ಮುಖಂಡರಾದ ಎಸ್.ಬಿ.ದಾನಪ್ಪಗೌಡರ, ಗುರುನಾಥ ಉಳ್ಳಾಗಡ್ಡಿ, ಗಂಗಯ್ಯ ಮುಳಗುಂದಮಠ, ಅಶೋಕ ಲಕ್ಕಣ್ಣವರ, ನಾಗಪ್ಪ ಮಾವಿನಕಾಯಿ ಸೇರಿದಂತೆ ಅನೇಕ ಮುಖಂಡರು, ರೈತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
30/08/2021 07:37 pm