ನವಲಗುಂದ : ನವಲಗುಂದ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-2 ರಲ್ಲಿ ತಾಲೂಕಾ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ತಾಲೂಕಾ ದಂಡಾಧಿಕಾರಿಗಳಾದ ಅನಿಲ ಬಡಿಗೇರ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಶಾಲೆಯ ದಾಖಲಾತಿಗೆ ಅನುಗುಣವಾಗಿ ಹಾಜರಾತಿ ಹೆಚ್ಚಿಸಬೇಕು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಮಾರ್ಗದರ್ಶನ ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಬಿ ಎಸ್ ಮಾಯಾಚಾರ್ಯ ಅವರು, ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ಶಾಲೆಗಳು ಪ್ರಾರಂಭವಾಗಿದ್ದು, ಈ ಕಾರ್ಯಕ್ರಮ ಯಶಸ್ವಿಗೊಳಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ ರಾ ಪ್ರಾ ಶಾ ಶಿ ಸಂಘದ ಅಧ್ಯಕ್ಷರಾದ ಎಸ್.ಎಫ್ ನೀರಲಗಿ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶಿವಾನಂದ ಕೊಳಲಿನ, ಶಿಕ್ಷಣ ಸಂಯೋಜಕರಾದ ಭಾಗೀರಥಿ ಮಳಲಿ, ಶಿವಾನಂದ ಬೆಂಚಿಕೇರಿ, ಸಂಪನ್ಮೂಲ ವ್ಯಕ್ತಿಗಳಾದnಎಮ್.ಎಚ್ ಚಿಕನಾಳ, ಪುರಸಭೆ ಸದಸ್ಯರಾದ ಅಡಿವೆಪ್ಪ ಶಿರಸಂಗಿ, ನಂ -3 ಪ್ರಧಾನ ಗುರುಗಳಾದ ಎನ್.ಎನ್ ಹಾಲಿಗೇರಿ, ಎಮ್ ವಗ್ಗರ, ಬಿ. ಬಿ. ಹೊನ್ನಕುದರಿ, ಡಿ. ಟಿ. ದಾಸರ ಉಪಸ್ಥಿತರಿದ್ದರು.
Kshetra Samachara
16/05/2022 06:51 pm