ಅಳ್ನಾವರ: ಇಲ್ಲಿನ ಸೇಂಟ್ ತೆರೇಸಾ ಪ್ರೌಢ ಶಾಲೆಯಲ್ಲಿ ನಡೆದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರ ಗುಣಗಾನದ ಗೀತೆಗಳು ಮೊಳಗಿದವು.
ಫಾದರ್. ಲೂಕಾಸ್ ಹಾಗೂ ಮುಖ್ಯಾಧ್ಯಾಪಕಿ ಸಿಸ್ಟರ್ ರೆನಿಟಾ ಇಬ್ಬರು ಮಹಾನ ಪುರುಷರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸತ್ಯ, ಅಂಹಿಸೆ , ಧರ್ಮ ಪ್ರತಿಪಾದಿಸಿದ ಮಹಾನ ಪುರುಷರ ಆದರ್ಶಗಳನ್ನು ರೂಡಿಸಿಕೊಳ್ಳಿ ಎಂದರು.
ರಾಜು ಅಷ್ಟೇಕರ, ಕಿರಣ ಡಿಸೋಜಾ, ಸಿ. ಇಮೇಲಿಯಾ, ವಿಜಯಲಕ್ಮಿ ಸಾವಂತ, ದೀಪಾ ಬಿಜಾಪೂರ, ಜೆನಿಫರ್, ಮೊನಿಕಾ , ಸೋನಿಯಾ, ಗೀತಾ ಫರ್ನಾಂಡಿಸ್, ಆನಂದ ಪಾಟೀಲ, ಮಂಜು ಪಾಟೀಲ, ಮಹಾಂತೇಶ ಸಂಪಗಾವಿ ಇದ್ದರು.
Kshetra Samachara
02/10/2020 05:20 pm