ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕನ್ನಡದಲ್ಲಿ ಬಂದಿದೆ ಸಾಮ್ರಾಟ್ ಅಶೋಕನ ಕುರಿತ ನಾಟಕ

ಧಾರವಾಡ: ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿರುವ ಪದ್ಮಶ್ರೀ ದಯಾಪ್ರಕಾಶ ಸಿನ್ಹಾರವರ ಸಾಮ್ರಾಟ್ ಅಶೋಕ ನಾಟಕ ಪ್ರದರ್ಶನವು

ಡಿ.27 ರಂದು ಸಂಜೆ 6.30 ಗಂಟೆಗೆ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕ ರಮೇಶ ಎಸ್. ಪರವಿನಾಯ್ಕರ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವದೆಹಲಿಯ ರಂಗನಿರ್ದೇಶಕಿ ವೀಣಾ ಶರ್ಮಾ ಅವರಿಂದ ರೆಪರ್ಟರಿ ಕಲಾವಿದರ ಮೂಲಕ ಸಾಮ್ರಾಟ್ ಅಶೋಕ ಎಂಬ ಹೊಸ ನಾಟಕ ಸಿದ್ಧಪಡಿಸಲಾಗಿದ್ದು,

ಇದು ಕನ್ನಡದಲ್ಲಿ ಮೊದಲ‌ ಪ್ರದರ್ಶನವಾಗಿದೆ. ಇದಾದ ಬಳಿಕ ರಂಗಾಯಣ ವ್ಯಾಪ್ತಿಯ 7 ಜಿಲ್ಲೆಯಲ್ಲಿ 25 ಪ್ರದರ್ಶನ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಈ ನಾಟಕ ಪ್ರದರ್ಶನಕ್ಕೆ ಹಿರಿಯ ವೃತ್ತಿ ರಂಗಭೂಮಿ‌ ಕಲಾವಿದೆ ಲಕ್ಷ್ಮೀಬಾಯಿ ಬಾಳಪ್ಪಾ ಏಣಗಿ ಚಾಲನೆ‌ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಡಿಸಿ ನಿತೇಶ‌‌ ಪಾಟೀಲ, ಎಸ್ ಪಿ ಕೃಷ್ಣಕಾಂತ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು‌.

ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿಯಾದ ಎಸಿ ಡಾ.ಗೋಪಾಲ್ ಕೃಷ್ಣ, ರಂಗ ನಿರ್ದೇಶಕಿ ವೀಣಾ ಶರ್ಮಾ ಇದ್ದರು.

Edited By : Manjunath H D
Kshetra Samachara

Kshetra Samachara

25/12/2020 02:01 pm

Cinque Terre

33.25 K

Cinque Terre

0

ಸಂಬಂಧಿತ ಸುದ್ದಿ