ನವಲಗುಂದ ಪಟ್ಟಣದ ಲಾಲಗಡ ಶ್ರೀ ಮಾರುತಿ ದೇವಸ್ಥಾನದಲ್ಲಿ ಇಂದು ಕಡೆಯ ಕಾರ್ತಿಕ ಮಾಸದ ಹಿನ್ನೆಲೆ ವಿಶೇಷ ಅಭಿಷೇಕ, ಪಲ್ಲಕ್ಕಿ ಸೇವೆ ಮಾಡುವ ಮೂಲಕ ಪೂಜೆಯನ್ನು ಸಲ್ಲಿಸಲಾಯಿತು.
ಇನ್ನೂ ಈ ವೇಳೆ ಪಲ್ಲಕ್ಕಿ ಸೇವೆ, ಕುಂಕುಮಾರ್ಚನೆ, ಅಭಿಷೇಕ ಮಾಡುವ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿ, ಗರ್ಭ ಗುಡಿಯನ್ನು ದೀಪಗಳಿಂದ ಮತ್ತು ಹೂವಿನಿಂದ ಶೃಂಗರಿಸಲಾಗಿತ್ತು. ಪೂಜೆಗೆ ಭಕ್ತರ ದಂಡು ದೇವಸ್ಥಾನಕ್ಕೆ ಹರಿದುಬಂದಿತ್ತು. ನಂತರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದವನ್ನು ನೀಡಲಾಯಿತು.
Kshetra Samachara
12/12/2020 09:15 pm