ಧಾರವಾಡ : ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ತತಕ್ಷಣದಿಂದ ಸ್ಥಾಪಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದೇಶ ಹೂರಡಿಸಿದ ಹಿನ್ನೆಲೆ ಧಾರವಾಡ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಇಂದು ನಗರದ ಕೋರ್ಟ್ ವೃತ್ತದ ಬಳಿ ವಿಜಯೋತ್ಸವ ಆಚರಿಸಿದರು.
ನಗರದ ಕೋರ್ಟ್ ವೃತ್ತದ ಬಳಿ ಸೇರಿದ ನೂರಾರು ಸಮಾಜದ ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ,ಸಿಹಿ ಹಂಚಿ ಸಂಭ್ರಮಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಶಾಸಕಿ ಸೀಮಾ ಮಸೂತಿ,ಮಾಜಿ ಮೇಯರ್ ಶಿವು ಹಿರೇಮಠ,ದೇವರಾಜ ಶಾಹಪುರ ಸೇರಿದಂತೆ ನೂರಾರು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಇದ್ದರು.
Kshetra Samachara
18/11/2020 12:12 pm