ಧಾರವಾಡ : ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬ ಅಂದ್ರೆ ಮೆರಗು ನೀಡುವುದೇ ದೀಪಾವಳಿ ಹಬ್ಬ,ಅದರಲ್ಲೂ ಅಲಂಕಾರಿಕ ವಸ್ತುಗಳಿಗೆ ತನ್ನದೆಯಾದ ರಂಗು ನೀಡುವ ಹಬ್ಬ ಎಂದರೆ ಮಹಾಲಕ್ಷ್ಮಿ ಪೂಜೆಯ ದೀಪಾವಳಿ ಹಬ್ಬ,ಎಲ್ಲರೂ ಐಶ್ವರ್ಯ ದೇವತೆಯನ್ನು ಪೂಜಿಸುವ ಸಲುವಾಗಿ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ತಯಾರಿ ಜೋರಾಗಿದ್ದು,ಬೆಳಕಿನಿಂದ ಕಂಗೊಳಿಸುವ ರಂಗುರಂಗಿನ ಆಕಾಶಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಖರೀದಿ ಜೋರಾಗಿ ನಡೆಯುತ್ತಿದೆ.
ನಗರದ ಸುಭಾಷ್ ರಸ್ತೆ, ಟಿಕಾರೆ ರೋಡ್,ಗಾಂಧಿ ಚೌಕ ಸೇರಿದಂತೆ ನಗರದ ಮಾರುಕಟ್ಟೆ ತುಂಬಾ ದೀಪಾವಳಿ ಹಬ್ಬದ ಖರೀದಿ ಜೋರಾಗಿದ್ದು, ಅದರಲ್ಲೂ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಹಾಗೂ ವಿವಿಧ ಆಕಾರದ ಆಕರ್ಷಕ ಆಕಾಶಬುಟ್ಟಿಗಳು ಹಾಗೂ ದೀಪಾಲಂಕಾರಿಕ ವಸ್ತುಗಳ ಕಣ್ಮನೆ ಸೆಳೆಯುತಿದ್ದು,ಮಾರುಕಟ್ಟೆಯ ತುಂಬ ನೂರಾರು ವಿಭಿನ್ನ ಆಕರ್ಷಕ ಆಕಾಶಬುಟ್ಟಿಗಳು ಆಕರ್ಷಿಸುತ್ತಿವೆ. ಗೋಲಾಕಾರ, ಯುಕಾರ,ಚೌಕಾಕಾರನಕ್ಷತ್ರಕಾರ,ಪಿರಾಮಿಡ್ ಆಕಾರ, ಸೇರಿದಂತೆ ಹಲವು ವಿನ್ಯಾಸದ ಆಕಾಶಬುಟ್ಟಿಗಳು ಗ್ರಾಹಕರ ಕಣ್ಮನೆ ಸೆಳೆಯುತ್ತಿವೆ.
Kshetra Samachara
12/11/2020 10:20 pm