ಧಾರವಾಡ : ನಗರದ ನೌಕರ ಭವನದಲ್ಲಿ ಇಂದು ಬೆಳಿಗ್ಗೆ ಧಾರವಾಡ ಜಿಲ್ಲೆಯ ಧಾರವಾಡ ಜಿಲ್ಲಾ ಘಟಕದ ಗೃಹರಕ್ಷಕದಳ ವತಿಯಿಂದ ನಿವೃತಿಗೊಂಡ ಗೃಹರಕ್ಷಕ ಆರ್.ಸಿ.ಕುಂದರಗಿ ಹಾಗೂ ಗೃಹರಕ್ಷಕಿ ಯು.ಆರ್. ಕಾಮಕರ ಅವರಿಗೆ ಬೀಳ್ಕೊಂಡುಗೆ ಹಾಗೂ ಗಣನೀಯ ಸೇವೆ ಸಲ್ಲಿದವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಜರುಗಿತು.
ನಾಗರಿಕ ಸೇವಾದಳದ ಮುಖ್ಯ ವಾರ್ಡನ್ ಆಗಿ ಅಧಿಕಾರ ಸ್ವೀಕರಿಸಿದ ಡಾ. ಸತೀಶ್ ಇರಕಲ್ ಹಾಗೂ ಡೆಪ್ಯೂಟಿ ವಾರ್ಡನ್ ರಾಗಿ ಅಧಿಕಾರ ವಹಿಸಿಕೊಂಡ ರಾಹುಲ್ ಮುಂಗೇಕರ್ ಅವರನ್ನು ಹಾಗೂ ಗೃಹರಕ್ಷಕದಳ ನಿವೃತ್ತ ಡೆಪ್ಯೂಟಿ ಕಮಾಂಡರ್ ಬಿ.ಆರ್.ಕಂದಗಲ್,ರಾಷ್ಟ್ರಪತಿ ಪದಕ ವಿಜೇತ ಹಾಗೂ ಸೇವೆಯಲ್ಲಿ ನಿವೃತ್ತಗೊಂಡಿದ್ದ ಎನ್.ವಿ.ಆಲದಕಟ್ಟಿ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಸತೀಶ್ ಪಾಟೀಲ ವಹಿಸಿದರು. ಮುಖ್ಯ ಅತಿಥಿಗಳಾಗಿ ಮೈಯೆಜ್ ಸಂಸ್ಥೆಯ ಡಾ.ಎಮ್.ಎ ಮುಮ್ಮಿಗಟ್ಟಿ, ಗೃಹರಕ್ಷಕದಳ ನಿವೃತ್ತ ಡೆಪ್ಯೂಟಿ ಕಮಾಂಡರ್ ಬಿ.ಆರ್.ಕಂದಗಲ್,ಸ್ಟಾಪ್ ಆಫೀಸರ್ ಡಾ.ಪ್ರಕಾಶ ಪವಾಡಶೆಟ್ಟಿ ವೇದಿಯಲ್ಲಿ ಇದ್ದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಅಧಿಕಾರಿಗಳಾದ ಸಹಾಯಕ ಬೋಧಕರಾದ ಟಿ.ಎ.ಬಾದಾಮಿ, ಆರ್ ಎಚ್ ಶಾಂತಗೇರಿ,ಜಿಲ್ಲಾ ಗೃಹರಕ್ಷಕದಳ ಧಾರವಾಡ ಘಟಕಾಧಿಕಾರಿ ಅಶೋಕ ಬಿ.ಗೌಡರ್,ಪ್ಲಟೂನ್ ಕಮಾಂಡರ್ ವಾದಿರಾಜ ದೇಶಪಾಂಡೆ,ಹಾಗೂ ಗೃಹರಕ್ಷಕ ಮತ್ತು ಗೃಹರಕ್ಷಕಕಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
11/11/2020 12:40 pm