ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದದಲ್ಲಿ ವಿಷ್ಣು ಸೇನೆ ಉದ್ಘಾಟನೆ

ನವಲಗುಂದ : 65 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಭಾನುವಾರ ಧಾರವಾಡ ತಾಲೂಕಿನ ನವಲಗುಂದ ಪಟ್ಟಣದ ವಿನಾಯಕ ಪೇಟೆಯಲ್ಲಿನ ಗಣಪ ದೇವಸ್ಥಾನಲ್ಲಿ ವಿಷ್ಣು ಸೇನೆ ಉದ್ಘಾಟನೆಯನ್ನು ಮಾಡಲಾಯಿತು.

ಇನ್ನೂ ಈ ವೇಳೆ ಮಾತನಾಡಿದ ನಾಗಲಿಂಗ ಮಠದ ಬಸವಲಿಂಗ ಸ್ವಾಮಿ, ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡ ಹೃದಯಗಳ‌ ಸಮ್ಮಿಲನ ಇದು ನಿರಂತರ ನಡೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಣ್ಣಪ್ಪ ಬಾಗಿ, ಬಸವರಾಜ ಮಣಕವಾಡ, ಈಶ್ವರ ಹೆಬಸೂರ, ಮತ್ತು ಡಾ.ವಿಷ್ಣುವರ್ಧನ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಮೃತ್ಯುಂಜಯ ಹಿರೇಮಠ, ಉಮಾಮಹೇಶ್ವರ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

02/11/2020 11:33 am

Cinque Terre

20.52 K

Cinque Terre

0

ಸಂಬಂಧಿತ ಸುದ್ದಿ