ಹುಬ್ಬಳ್ಳಿ: ವಿವಾದಾತ್ಮಕ ಪೋಸ್ಟ್‌ನಿಂದ ಹಳೇ ಹುಬ್ಬಳ್ಳಿಯಲ್ಲಿ ಗಲಭೆಕೋರರಿಂದ ಗಲಭೆಯಾಗಿದ್ದು, ಆ ಭಯಾನಕ ಘಟನೆಗೆ ಮೌಲ್ವಿಯಿಂದಲ್ಲೇ ಪ್ರಚೋದನೆ ಸಿಕ್ಕಿತ್ತಾ ಎಂಬುವುದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಹೌದು. ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ಗಲಭೆಕೋರರಿಂದ ಕಲ್ಲು ತೂರಾಟ, ಪೊಲೀಸರ ಮೇಲೆ ದಾಳಿ, ಪೋಲೀಸ್ ವಾಹನಗಳನ್ನು ಜಖಂ ಮಾಡಿದ್ದು, ಉದ್ದೇಶಪೂರ್ವಕವಾಗಿಯೇ ಎಂಬ ಸಂಶಯ ಮೂಡಿದೆ.
ಆದರೆ ಶಾಂತಿ ಮಂತ್ರ ಜಪಿಸಬೇಕಿದ್ದ ವ್ಯಕ್ತಿಯಿಂದಲ್ಲೇ ಗಲಭೆಗೆ ಪ್ರಚೋದನೆ ಸಿಕ್ಕಿತ್ತಾ? ಘಟನೆಯ ಸಂದರ್ಭದಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಸ್ಟೇಷನ್ ಎನ್ನದೇ ಗಲಭೆಕೋರರಿಗೆ ಪ್ರಚೋದನೆ ಮಾಡುತ್ತಿರುವ ವಿಡಿಯೋವೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆ ಆ ಮೌಲ್ವಿ ಸಂಚು ರೂಪಿಸಿದ್ನಾ? ಘಟನೆಗೆ ಕಿಚ್ಚು ಹಚ್ಚಿ ಆ ಮೌಲ್ವಿ ನಾಪತ್ತೆಯಾಗಿರುವುದಾದರೂ ಎಲ್ಲಿಗೆ ಎಂಬುದು ತಿಳಿದು ಬರಬೇಕಿದೆ.
ಹುಬ್ಬಳ್ಳಿಯ ದರ್ಗಾವೊಂದರ ಮೌಲ್ವಿ ಎಂದ ಹೇಳಲಾಗುತ್ತಿರುವ ಈ ಮೌಲ್ವಿ ಹುಡುಕಾಟಕ್ಕೆ ಖಾಕಿ ಪಡೆ ಬಲೆ ಬೀಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/04/2022 07:13 pm