ಅಣ್ಣಿಗೇರಿ: ಕಿತ್ತೂರಾಣಿ ಚೆನ್ನಮ್ಮ ಅವರಣದಲ್ಲಿ ಡಾಕ್ಟರ್ ರಾಜಕುಮಾರ್ ಅಭಿಮಾನಿ ಗೆಳೆಯರ ಬಳಗದ ವತಿಯಿಂದ ಹುಟ್ಟು ಹಬ್ಬ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದಾಸೋಹ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಹಜರತ್ ಸೈಯದ್ ಖಾದ್ರಿ ಕಮಲಾಪುರ ದರ್ಗಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವರನಟ ಡಾಕ್ಟರ್ ರಾಜಕುಮಾರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಕ್ಕಳು ಭರತನಾಟ್ಯ ನೃತ್ಯ ಮುಖಾಂತರ ಕಾರ್ಯಕ್ರಮಕ್ಕೆ ಮೆರುಗು ತಂದರು.
ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ್,ಕಸಾಪ ಅಧ್ಯಕ್ಷರಾದ ರವಿರಾಜ ವರ್ಣೇಕರ್,ಅನ್ವರ್ ಹುಬ್ಬಳ್ಳಿ, ಭೀಮಸಿ ಮರಡಿ,ಪಾಂಡುರಂಗ ಓಸೇಕರ್ ಸೇರಿದಂತೆ ಡಾಕ್ಟರ್ ರಾಜಕುಮಾರ್ ಗೆಳೆಯರ ಬಳಗದ ಎಲ್ಲ ಪದಾಧಿಕಾರಿಗಳು ಹಾಗೂ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.
Kshetra Samachara
10/05/2022 02:01 pm