ಹುಬ್ಬಳ್ಳಿ: ನವೋದ್ಯಮಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ ಟೈಕಾನ್ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗಿದೆ. ಸಾವಿರಾರು ನವೋದ್ಯಮಿಗಳಿಗೆ ಈ ಕಾರ್ಯಕ್ರಮ ಪ್ರೋತ್ಸಾಹ ನೀಡುತ್ತ ಬಂದಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಹೇಳಿದರು.
ಟೈ ಹುಬ್ಬಳ್ಳಿ ಆಯೋಜಿಸಿದ್ದ ಯುವ ಟೈಕಾನ್-2021ರ ಸಮ್ಮೇಳನವನ್ನು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಬಹಿರಂಗ ಸಮಾವೇಶ ಮಾಡದೇ ವರ್ಚುವಲ್ ಮೂಲಕ ಟೈ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು.
ಆನ್‌ಲೈನ್ ಸಮಾವೇಶಕ್ಕೆ 7500 ಜನ ನೋಂದಣಿ ಮಾಡಿಕೊಂಡು ದೇಶದ ಮೂಲೆ ಮೂಲೆಯಿಂದ ಭಾಗಿಯಾಗಿದ್ದರು. ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಮತ್ತು ಆರಂಭಕ್ಕೆ ತಯಾರಿ ನಡೆಸುತ್ತಿರುವ ನವೋದ್ಯಮಿಗಳಿಗೆ, ಪರಿಣಿತ ಹಾಗೂ ಸಾಹಸೋದ್ಯಮಿಗಳಿಗೆ ಸಂಕೇಶ್ವರ ಆನ್ ಲೈನ್ ಮೂಲಕವೇ ಒಂದಷ್ಟು ಕಿವಿಮಾತು ಹೇಳಿದರು.
ಯೂ ಅನ್ ಲಿಮಿಟೆಡ್ ವಿಷಯವಾಗಿ ಖ್ಯಾತ ಸಲಹೆಗಾರ್ತಿ ಡಾ.ವುಷಿ ಮೋಹನದಾಸ್, 'ಆತ್ಮನಿರ್ಭರ ' ಯೋಜನೆಯ ಬಗ್ಗೆ ಉದ್ಯಮಿ ಅನುಮೋಲ್ ಗೋರ್ಗ್ , 'ಉತ್ತರ ಕರ್ನಾಟಕದಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ಡಾ.ಗುರುರಾಜ್ ದೇಶಪಾಂಡೆ ಹಾಗೂ 'ಲಡಾಕ್ ನ ಹಸಿರೀಕರಣ ಮತ್ತು ಆಧುನಿಕ ಶಿಕ್ಷಣ ನೀತಿ ' ಕುರಿತಾಗಿ ಸೀನಮ್ ವಾಂಗ್ಯುಕ ಅವರು ಯುವ ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿದರು.
ಟೈ ಹುಬ್ಬಳ್ಳಿ ಅಧ್ಯಕ್ಷ ಅಜಯ ಹಂಡಾ , ಟೈಕಾನ್ ಸಂಚಾಲಕ ವಿಜಯ ಮಾನೆ, ಟೈ ನಿರ್ಗಮಿತ ಅಧ್ಯಕ್ಷ ಸಂದೀಪ ಬಿಡಸಾರಿಯಾ, ದೇಶಪಾಂಡೆ ಫೌಂಡೇಷನ್ ಸಿಇಓ ವಿವೇಕ ಪವಾರ ವರ್ಚುವಲ್ ವೇದಿಕೆಯಲ್ಲಿದ್ದರು.
Kshetra Samachara
30/01/2021 06:21 pm